ಉಡುಪಿ:ಚಾಲಕನೋರ್ವ ಮದ್ಯಪಾನ ಮಾಡಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕಂಟೈನರ್ ಅನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಕೆಲಕಾಲ ಆತಂಕ ಸೃಷ್ಟಿಸಿದ್ದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಮದ್ಯಪಾನ ಮಾಡಿ ಅಡ್ಡಾದಿಡ್ಡಿ ಕಂಟೈನರ್ ಚಾಲನೆ ಎಣ್ಣೆ ನಶೆಯಲ್ಲಿದ್ದ ಚಾಲಕ ಯದ್ವಾತದ್ವಾ ಚಾಲನೆ ಮಾಡಿದ್ದು, ಮುಳ್ಳಿಕಟ್ಟೆಯಲ್ಲಿ ಹಾಕಿದ್ದ ಬ್ಯಾರಿಕೇಡ್ ಅನ್ನು 4 ಕಿಮೀ ದೂರದವರೆಗೆ ಎಳೆದುಕೊಂಡು ಹೋಗಿ ಬಳಿಕ ಅರಾಟೆ ಸೇತುವೆ ತಡೆಗೋಡೆಗೆ ಕಂಟೈನರ್ ಡಿಕ್ಕಿ ಹೊಡೆದಿದೆ.
ಹೆಮ್ಮಾಡಿ ಬಳಿ ಮುಳ್ಳಿಕಟ್ಟೆ ರಿಕ್ಷಾ ಚಾಲಕರು ಕಂಟೈನರ್ ಗಾಜಿಗೆ ಕಲ್ಲೆಸೆದು ನಿಲ್ಲಿಸಿ ಚಾಲಕನನ್ನು ಕುಂದಾಪುರ ಸಂಚಾರಿ ಪೊಲೀಸರಿಗೊಪ್ಪಿಸಿದ್ದಾರೆ. ಈ ವೇಳೆ ಅಧಿಕಾರಿಗಳು ವಾಹನವನ್ನು ವಶಕ್ಕೆ ಪಡೆದರು. ಛತ್ತೀಸ್ಗಢ ರಾಜ್ಯದ ನೋಂದಣಿಯ ಕಂಟೈನರ್ನಲ್ಲಿ ಕುರುಚಲು ಹುಲ್ಲು ಸಾಗಿಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: 'ವಿಡಿಯೋದಲ್ಲಿರುವುದು ನಾನಲ್ಲ, ವಿರೋಧಿಗಳು ನಿಷ್ಪಕ್ಷಪಾತ ವ್ಯಕ್ತಿತ್ವ ಹಾಳು ಮಾಡಲು ಇದನ್ನು ನಿರ್ಮಿಸಿದ್ದಾರೆ': ಡಿವಿಎಸ್