ಉಡುಪಿ: ವರದಕ್ಷಿಣೆ ಕಿರುಕುಳ ನೀಡಿದ ಬಳಿಕ ಪತಿಗೆ ಮೂರು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದ ಘಟನೆ ಕುಂದಾಪುರದ ವಕ್ವಾಡಿಯಲ್ಲಿ ನಡೆದಿದೆ. ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ನೂರ್ ಜಹಾನ್ (25) ಎಂಬಾಕೆ ಭಟ್ಕಳದ ರಿಯಾಜ್ ಎಂಬಾತನನ್ನು ಮದುವೆಯಾಗಿದ್ದರು. ಗಂಡ ಸೇರಿದಂತೆ ಆತನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ನೂರ್ ಜಹಾನ್ ಆರೋಪಿಸಿದ್ದಾರೆ.
ವರದಕ್ಷಿಣೆ ಕಿರುಕುಳ ನೀಡಿದ ಬಳಿಕ ಗೊತ್ತಾಯ್ತು ಗಂಡನಿಗೆ ತಾನು 3ನೇ ಪತ್ನಿ ಅಂತ... ಕೋರ್ಟ್ ಕದ ಬಡಿದ ಮಹಿಳೆ - ಉಡುಪಿ ಜಿಲ್ಲಾ ಸುದ್ದಿ
ವರದಕ್ಷಿಣೆ ತರುವಂತೆ ಗಂಡ ಹಾಗೂ ಗಂಡನ ಮನೆಯವರು ಕಿರುಕುಳ ನೀಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು ನ್ಯಾಯಕ್ಕಾಗಿ ನೊಂದ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ವರದಕ್ಷಿಣೆ ಕಿರುಕುಳ
ಈ ಹಿಂದೆ ರಿಯಾಜ್ ಗೆ ಮೂರು ಮದುವೆಯಾಗಿದ್ದು ವರದಕ್ಷಿಣೆಗಾಗಿ ಅವರನ್ನು ಬಿಟ್ಟಿರುವುದಾಗಿ ಪತ್ನಿ ಆರೋಪಿಸಿದ್ದಾಳೆ. ಗಂಡ ರಿಯಾಜ್, ಮಾವ ಹಮ್ಜಾ, ಅತ್ತೆ ಬಲ್ಕಿಸ್ ಹಾಗು ನಾದಿನಿಯರಾದ ಜಮೀಲಾ ಮತ್ತು ಶಬನಾ ಎಂಬುವವರ ಮೇಲೆ ವರದಕ್ಷಿಣಿ, ಕಿರುಕುಳ ಪ್ರಕರಣ ದಾಖಲಾಗಿದೆ. ವರದಕ್ಷಿಣೆ ತರುವಂತೆ ಎಲ್ಲರೂ ಸೇರಿ ಚಿತ್ರಹಿಂಸಿ ನೀಡಿದ್ದಾರೆ. ಇದರಿಂದ ನಾನು ತಪ್ಪಿಸಿಕೊಂಡು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವುದಾಗಿ ನೂರ್ ಜಹಾನ್ ತಿಳಿಸಿದ್ದಾರೆ.