ಉಡುಪಿ: ಕೊರೊನಾ ಸೋಂಕಿತ ಗರ್ಭಿಣಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ ಉಡುಪಿ ಜಿಲ್ಲೆ ಸೋಂಕು ಮುಕ್ತವಾಗಿದೆ.
ಕೊರೊನಾ ಸೋಂಕಿತ ಗರ್ಭಿಣಿ ಆಸ್ಪತ್ರೆಯಿಂದ ಡಿಸ್ಚಾರ್ಜ್... ಕೋವಿಡ್ ಮುಕ್ತ ಜಿಲ್ಲೆಯಾದ ಉಡುಪಿ! - ಕೊರೊನಾ ಸೋಂಕಿತ ಗರ್ಭಿಣಿ ಗುಣಮುಖ
ಕೊರೊನಾ ಸೋಂಕಿತ ಗರ್ಭಿಣಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ ಉಡುಪಿ ಜಿಲ್ಲೆ ಸೋಂಕು ಮುಕ್ತವಾಗಿದೆ.
ಗರ್ಭಿಣಿಯು ಉಡುಪಿಯ ಡಾ. ಟಿ.ಎಂ.ಎ.ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರಾದ ಇವರನ್ನು ಮಾನವೀಯತೆ ನೆಲೆಯಲ್ಲಿ ಇಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಮಹಿಳೆ ಗುಣಮುಖವಾದ ಹಿನ್ನೆಲೆಯಲ್ಲಿ ಇಂದು ಡಿಸ್ಚಾರ್ಜ್ ಮಾಡಲಾಗಿದೆ.
ಈ ಮೊದಲು ಸೋಂಕು ತಗುಲಿದ್ದ ಮೂವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಗರ್ಭಿಣಿಗೆ ಇಲಾಖೆ ವತಿಯಿಂದ ಉಡುಪಿ ಮಲ್ಲಿಗೆಯ ಹೂವು ಮತ್ತು ಹಣ್ಣು ಕೊಟ್ಟು ಬೀಳ್ಕೊಡಲಾಯಿತು. ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್ಪಿ ವಿಷ್ಣುವರ್ಧನ್, ಸಿಇಒ ಪ್ರೀತಿ ಗೆಹ್ಲೋಟ್ ಈ ವೇಳೆ ಉಪಸ್ಥಿತರಿದ್ದರು.