ಕರ್ನಾಟಕ

karnataka

ETV Bharat / state

ಉಡುಪಿ ಯುವತಿ ಕೊಲೆ ಪ್ರಕರಣ: ಮಗಳ ಮಾನ ಹರಾಜು ಹಾಕದಂತೆ ಪೋಷಕರ ಮನವಿ - ಉಡುಪಿಯಲ್ಲಿ ಪ್ರಿಯಕರನಿಂದಲೇ ಹತ್ಯೆಯಾದ ಯುವತಿ

ಉಡುಪಿಯಲ್ಲಿ ಪ್ರಿಯಕರನಿಂದಲೇ ಹತ್ಯೆಯಾದ ಯುವತಿ ಮನೆಯವರು ತಮ್ಮ ಮನೆಮಗಳ ಬಗ್ಗೆ ಇಲ್ಲಸಲ್ಲದ ಕತೆ ಕಟ್ಟಿ ಮಾನ ಹರಾಜು ಹಾಕುವುದನ್ನು ನಿಲ್ಲಿಸಿ ಎಂದು ಸುದ್ದಿಗೋಷ್ಠಿ ನಡೆಸಿ ಮನವಿ ಮಾಡಿಕೊಂಡಿದ್ದಾರೆ.

udupi
ಮೃತ ಯುವತಿಯ ಪೋಷಕರ ಮನವಿ

By

Published : Sep 4, 2021, 7:54 PM IST

Updated : Sep 4, 2021, 11:05 PM IST

ಉಡುಪಿ: ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಬಳಿಕ ತಾನು ಅದೇ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಸಾವನ್ನಪ್ಪಿದ್ದ. ಇದೇ ವಿಚಾರವಾಗಿ ಮೃತ ಯುವತಿ ಸೌಮ್ಯಶ್ರೀ ಮನೆಯವರು ಸುದ್ದಿಗೋಷ್ಠಿ ನಡೆಸಿದ್ದಾರೆ.

ಮೃತ ಯುವತಿಯ ಪೋಷಕರ ಮನವಿ

ಇದನ್ನೂ ಓದಿ:ಉಡುಪಿ:ಪ್ರೇಯಸಿಗೆ ಚಾಕು ಇರಿದು ತಾನೂ ಕತ್ತು ಕುಯ್ದುಕೊಂಡಿದ್ದ ಯುವಕ - ಇಬ್ಬರೂ ಸಾವು

ಸಾಮಾಜಿಕ ಜಾಲತಾಣಗಳಲ್ಲಿ ಸೌಮ್ಯಶ್ರೀ ಕುರಿತು ಇಲ್ಲಸಲ್ಲದ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಅದೆಲ್ಲ ಸುಳ್ಳು, ಅವರಿಬ್ಬರದ್ದು, ಎಂಟು ವರ್ಷಗಳ ಪ್ರೀತಿ ಅಲ್ಲ, ಮೂರುವರೆ ವರ್ಷಗಳಿಂದಷ್ಟೇ ಪ್ರೀತಿಸುತ್ತಿದ್ದರು. ಸುಳ್ಳು ಸುದ್ದಿ ಹಬ್ಬಿಸಿ ಕುಟುಂಬದ ಮಾನ ಹರಾಜು ಹಾಕುವುದನ್ನು ನಿಲ್ಲಿಸಿ. ಮನೆ ಮಗಳನ್ನು ಕಳೆದುಕೊಂಡು ನೋವಿನಲ್ಲಿರುವ ನಮಗೆ ಇಂತಹ ಸುದ್ದಿಗಳು ಇನ್ನಷ್ಟು‌ ಕುಗ್ಗಿಸುವಂತೆ ಮಾಡಿವೆ ಎಂದು ಆಕೆಯ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ:ನೀ ನನಗೆ ಬೇಕು.. ನೀ ನನಗೆ ಬೇಕು ಬಾ.. ಬಾ.. ಕೊನೆಗೂ ಸುಖಾಂತ್ಯ ಕಂಡ ತ್ರಿಕೋನ ಪ್ರೇಮ ಕಥೆ..

ಒಬ್ಬ ಹೆಣ್ಣು ಮಗಳ ಬಗ್ಗೆ ಇಲ್ಲಸಲ್ಲದ‌ ಕತೆಗಳನ್ನು ಸೃಷ್ಟಿಸಿ ಕುಟುಂಬದ ಮಾನ ಹರಾಜು ಹಾಕುವುದನ್ನು ದಯವಿಟ್ಟು ನಿಲ್ಲಿಸಬೇಕು ಅಂತ ಮನವಿ ಮಾಡಿದ್ದಾರೆ. ಸೌಮ್ಯಳನ್ನು ಕೊಂದು ತಾನೂ ಸಾವನ್ನಪ್ಪಿದ್ದ ಸಂದೇಶ್‌ ಕುಲಾಲ್​​ಗೆ ಕೆಟ್ಟ ಚಟಗಳಿತ್ತು ಎಂದು ಜನರು ಹೇಳುತ್ತಿದ್ದು, ಘಟನೆಯ ದಿನ ಕೂಡ ಮಾದಕ ವಸ್ತು ಸೇವನೆ ಮಾಡಿರುವ ಸಂಶಯ ಇದೆ. ಆರಂಭದಿಂದ ಸಣ್ಣ ಸಣ್ಣ ವಿಷಯಗಳಿಗೆ ಕೂಡ ಸೌಮ್ಯಶ್ರೀಯಿಂದಲೇ ಹಣವನ್ನು ಖರ್ಚು ಮಾಡಿಸುತ್ತಿದ್ದ ಎಂದು ಸೌಮ್ಯಾಳ ಅತ್ತಿಗೆ ಹಾಗೂ ಆಕೆಯ ತಾಯಿ ಆರೋಪಿಸಿದ್ದಾರೆ.

Last Updated : Sep 4, 2021, 11:05 PM IST

ABOUT THE AUTHOR

...view details