ಉಡುಪಿ :ನಗರದ ಹೊರವಲಯದ ಕೊಳಕೊಳ್ಳಿ ಊರಿನ ಪಾಳು ಬಿದ್ದ ಕಟ್ಟಡದಲ್ಲಿ ಅನ್ವೇಷಣೆ ನಡೆಸಿದ ಗ್ರಾಮಸ್ಥರಿಗೆ ಪಂಚ ಲೋಹದ ಬಬ್ಬುಸ್ವಾಮಿ ವಿಗ್ರಹ, ದೈವದ ಆಯುಧಗಳು ಹಾಗೂ ಆಭರಣಗಳು ಪತ್ತೆಯಾಗಿವೆ.
ಇದು ಬಬ್ಬು ಸ್ವಾಮಿ ದೇವರ ಗುಡಿಯಾಗಿದ್ದು, ಹಿಂದಿನ ಕಾಲದಲ್ಲಿ ಉತ್ಸವ, ಪೂಜೆಗಳು ನಡೆಯುತ್ತಿತ್ತು. ಕಾಲ ಕ್ರಮೇಣ ಶಿಥಿಲಾವಸ್ಥೆಗೆ ತಲುಪಿ ಭೂ ಗರ್ಭ ಸೇರಿತ್ತು.
ಭೂ ಗರ್ಭದಲ್ಲಿ ಹೂತು ಹೋಗಿದ್ದ ದೈವದ ವಿಗ್ರಹ ಪತ್ತೆ ಹಲವು ದಶಕಗಳಿಂದಲೂ ಶಿಥಿಲಾವಸ್ಥೆಗೆ ತಲುಪಿರುವ ಈ ದೈವಸ್ಥಾನವನ್ನು ಗ್ರಾಮಸ್ಥರೆಲ್ಲರೂ ಸೇರಿ ಹೊಸ ಗುಡಿ ನಿರ್ಮಿಸಬೇಕು ಎಂದು ದೇವರ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿದೆ. ಮುಂದೆ ದೈವಸ್ಥಾನ ನಿರ್ಮಾಣವಾದ ಬಳಿಕ ಇದೇ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಗ್ರಾಮದ ಜನರು ತೀರ್ಮಾನಿಸಿದ್ದಾರೆ.
ಓದಿ:ಜೆಸಿಬಿಗೆ ಡಿಕ್ಕಿ ಹೊಡೆದು ಉರುಳಿಸಲು ಯತ್ನಿಸಿದ ಕಾಡಾನೆ.. ವಿಡಿಯೋ
ಬಬ್ಬು ಸ್ವಾಮಿ ದೈವ ಈ ರೀತಿಯ ಪವಾಡ ನಡೆಸಿ ತನ್ನ ಇರುವಿಕೆ ಸಾಬೀತುಪಡಿಸಿದೆಯಂತೆ. ಊರಿನವರೆಲ್ಲರೂ ಒಟ್ಟಾಗಿ ಸೇರಿ ದೈವಸ್ಥಾನ ನಿರ್ಮಿಸುವ ಪುಣ್ಯ ಕೆಲಸ ಕೂಡಿ ಬಂದಿದೆ ಅಂತಾರೆ ಸ್ಥಳೀಯರು.