ಕರ್ನಾಟಕ

karnataka

ETV Bharat / state

ಉಡುಪಿ: ಸರ್ವೀಸ್ ರಸ್ತೆಗೆ ಆಗ್ರಹಿಸಿ ಪಾದಯಾತ್ರೆ

ಸರ್ವೀಸ್​ ರಸ್ತೆಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ವತಿಯಿಂದ ಪಾದಯಾತ್ರೆ ಮಾಡುವ ಮೂಲಕ ಪಾದಯಾತ್ರೆ ಮಾಡಲಾಯಿತು.

ಪಾದಯಾತ್ರೆ

By

Published : Oct 1, 2019, 9:20 AM IST

ಉಡುಪಿ: ಸಾಸ್ತಾನ ಪ್ರದೇಶದಲ್ಲಿ ಸರ್ವೀಸ್ ರಸ್ತೆಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ವತಿಯಿಂದ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಸರ್ವೀಸ್ ರಸ್ತೆಗೆ ಆಗ್ರಹಿಸಿ ಪಾದಯಾತ್ರೆ

ಮಾಬುಕಳ ಬಸ್ ಸ್ಟ್ಯಾಂಡ್​ ಮೂಲಕ ಆರಂಭಗೊಂಡ ಪ್ರತಿಭಟನಾ ಪಾದಯಾತ್ರೆಗೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿತ್ತು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಸಾಸ್ತಾನ ಪ್ರದೇಶದಲ್ಲೂ

z ಟೋಲ್ ಆರಂಭಗೊಂಡಿದ್ದು , ಇದರ ಜೊತೆ ಸರ್ವೀಸ್ ರಸ್ತೆ ಕೂಡಾ ಆಗಬೇಕಿತ್ತು. ಆದ್ರೆ ಕೆಲಸ ನಿರ್ವಹಿಸಿದ ನವಯುಗ ಕಂಪೆನಿ ಬರೀ ಟೋಲ್ ವಸೂಲಿ ಮಾಡುವುದರಲ್ಲಿ ನಿರತವಾಗಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಿಂದೆ ಬಿದ್ದಿದೆ. ಸೈಕಲ್ ಸವಾರರು, ಪಾದಚಾರಿಗಳು , ವಾಹನ ಸವಾರರು ಪ್ರತಿನಿತ್ಯ ಸಂಭವಿಸುತ್ತಿರುವ ಅಫಘಾತ, ಅವಘಡದಿಂದಾಗಿ ನರಕಯಾತನೆ ಅನುಭವಿಸುವಂತಾಗಿದೆ.

ಮಾಬುಕಳದಿಂದ ಆರಂಭವಾದ ಪಾದಯಾತ್ರೆ ಸಾಸ್ತಾನ ಸಾಲಿಗ್ರಾಮ ಮೂಲಕ ಸಾಗಿ ಕೋಟದಲ್ಲಿ ಸಮಾಪನಗೊಂಡಿತು. ಪ್ರತಿಭಟನೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.

ABOUT THE AUTHOR

...view details