ಕರ್ನಾಟಕ

karnataka

ETV Bharat / state

ಸೆಪ್ಟೆಂಬರ್ 10ರಂದು ಸರಳವಾಗಿ ಕೃಷ್ಣ ಮಠದ ಅಷ್ಟಮಿ ಆಚರಿಸಲು ನಿರ್ಧಾರ - ಮುದ್ದು ಕೃಷ್ಣ ಸ್ಪರ್ಧೆ

ಕೊರೊನಾ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10ರಂದು ಉಡುಪಿಯ ಕೃಷ್ಣ ಮಠದ ಅಷ್ಟಮಿ ಹಾಗೂ ಮರುದಿನ ವಿಟ್ಲಪಿಂಡಿ ಉತ್ಸವ ಸರಳವಾಗಿ ಆಚರಿಸಲು ತೀರ್ಮಾನಿಲಾಗಿದೆ.

decision to celebrate the Ashtami of Krishna Math simply on September 10th.mp4
ಸೆಪ್ಟೆಂಬರ್ 10ರಂದು ಸರಳವಾಗಿ ಕೃಷ್ಣ ಮಠದ ಅಷ್ಟಮಿ ಆಚರಿಸಲು ನಿರ್ಧಾರ

By

Published : Sep 5, 2020, 9:38 PM IST

ಉಡುಪಿ: ಉಡುಪಿಯ ಕೃಷ್ಣ ಸನ್ನಿಧಿಯಲ್ಲಿ ನಡೆಯುವ ಅಷ್ಟಮಿ ಅಂದರೆ ನಾಡಿಗೆಲ್ಲ ಹಬ್ಬದ ವಾತಾವರಣ. ಅಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ನೋಡುವುದಕ್ಕೆ ನಾಡಿನ ಮೂಲೆ-ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ಆದರೆ, ಕೊರೊನಾದಿಂದಾಗಿ ಈ ಬಾರಿ ಅಷ್ಟಮಿಯನ್ನು ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ.

ಪ್ರತಿ ವರ್ಷ ಕೃಷ್ಣಾಷ್ಟಮಿಯಂದು ಕೃಷ್ಣ ಮಠದ ರಥ ಬೀದಿಯ ತುಂಬೆಲ್ಲ ಮೆರವಣಿಗೆ ಮಾಡಲಾಗುತ್ತಿತ್ತು. ಭಕ್ತರ ದಂಡು, ಹುಲಿ ವೇಷಗಳ ಕುಣಿತ, ಚೆಂಡೆ ನಗಾರಿ ಸದ್ದು ಹಾಗೂ ಮುದ್ದು ಕೃಷ್ಣ ಸ್ಪರ್ಧೆ ನಡೆಯುತ್ತಿದ್ದವು. ಇದನ್ನು ನೋಡಲು ನಾಡಿನ ಮೂಲೆ-ಮೂಲೆಗಳಿಂದ ಜನರು ಆಗಮಿಸುತ್ತಿದ್ದರು. ಈ ಬಾರಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಕೃಷ್ಣ ಮಠ, ಮುದ್ದು ಕೃಷ್ಣ ಸ್ಪರ್ಧೆಯನ್ನು ಆನ್​ಲೈನ್​ ಮೂಲಕ ನಡೆಸಲು ನಿರ್ಧರಿಸಿದೆ.

ಸೆಪ್ಟೆಂಬರ್ 10ರಂದು ಅಷ್ಟಮಿ ಹಾಗೂ ಮರುದಿನ ವಿಟ್ಲಪಿಂಡಿ ಉತ್ಸವ ಮಾಡಲು ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ. ಧಾರ್ಮಿಕವಾಗಿ ಹಿಂದಿನಿಂದ ನಡೆದು ಬಂದ ಸಂಪ್ರದಾಯವನ್ನು ಪಾಲಿಸಿಕೊಂಡು ಸರಳವಾಗಿ ಅಷ್ಟಮಿಯನ್ನು ಆಚರಣೆ ಮಾಡಲಾಗುತ್ತಿದೆ. ಅಷ್ಟಮಿಯನ್ನು ಭಕ್ತರು ಕಣ್ತುಂಬಿಕೊಳ್ಳಲು ಆನ್​ಲೈನ್​ ಲೈವ್​ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಕೃಷ್ಣ ಮಠ, ಮುದ್ದು ಕೃಷ್ಣ ಸ್ಪರ್ಧೆಯನ್ನು ಆನ್​ಲೈನ್​ ಮೂಲಕ ನಡೆಸಲು ನಿರ್ಧರಿಸಿದೆ.

ABOUT THE AUTHOR

...view details