ಕರ್ನಾಟಕ

karnataka

ETV Bharat / state

ಚರ್ಚೆಗೆ ಗ್ರಾಸವಾದ ಮೋಯ್ಲಿ ಹೇಳಿಕೆ:  ಫೋನ್​ನಲ್ಲಿ ವಾಗ್ವಾದ ನಡೆಸಿದ ಆಡಿಯೋ ವೈರಲ್​! - ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್​ನಲ್ಲಿ‌ ಇಲ್ಲ, ಜೆಡಿಎಸ್​​ನಲ್ಲಿದ್ದಾರೆ ಎಂಬ ವಿಷಯದ ಕುರಿತು ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಹಾಗೂ ಉಡುಪಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಅಮೀನ್ ಮಧ್ಯೆ ನಡೆದಿರುವ ವಾಗ್ವಾದದ ಆಡಿಯೋ ಈಗ ವೈರಲ್ ಆಗಿದೆ.

ಮೊಯ್ಲಿ ಪುತ್ರ ಹಾಗೂ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷನ ಆಡಿಯೋ ವೈರಲ್

By

Published : Sep 1, 2019, 1:04 AM IST

ಉಡುಪಿ:ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಹಾಗೂ ಉಡುಪಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಅಮೀನ್ ಮಧ್ಯೆ ನಡೆದಿರುವ ವಾಗ್ವಾದದ ಆಡಿಯೋವೊಂದು ಕರಾವಳಿಯಲ್ಲಿ ಈಗ ಸಖತ್​​ ಸದ್ದು ಮಾಡುತ್ತಿದೆ.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್​ನಲ್ಲಿ‌ ಇಲ್ಲ, ಜೆಡಿಎಸ್​​ನಲ್ಲಿದ್ದಾರೆ ಎಂಬ ವಿಷಯದ ಕುರಿತು ಅವರಿಬ್ಬರು ವಾಗ್ವಾದ ಮಾಡಿರುವ ಜಟಾಪಟಿ ಆಡಿಯೋ ವೈರಲ್ ಆಗುತ್ತಿದೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್​​ನಲ್ಲಿಲ್ಲ ಅಂತಾ ವೀರಪ್ಪ ಮೊಯ್ಲಿ ಹೇಳಿದ್ದರು. ತಂದೆ ಜೊತೆ ಮಗ ಹರ್ಷ ಮೊಯ್ಲಿ ಕೂಡ ವೇದಿಕೆ ಹಂಚಿಕೊಂಡಿದ್ದರು. ಬಳಿಕ ಮೊಯ್ಲಿ ಹೇಳಿಕೆಗೆ ಅವರ ಪುತ್ರನ ಜೊತೆ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಅಮೀನ್ ವಾಗ್ವಾದಕ್ಕಿಳಿದಿದ್ದಾರೆ.

ಮೊಯ್ಲಿ ಪುತ್ರ ಹಾಗೂ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷನ ಆಡಿಯೋ ವೈರಲ್

ತುಳುವಿನಲ್ಲಿರುವ ಸಂಭಾಷಣೆಯ ಆಡಿಯೋದಲ್ಲಿ, ನೀವೇನೂ ಉಡುಪಿ ಕಾಂಗ್ರೆಸ್​​ನ‌ ಪದಾಧಿಕಾರಿಯಲ್ಲ, ಹೀಗಾಗಿ ಪ್ರಮೋದ್ ಸುದ್ದಿಗೆ ಬರಬೇಡಿ ಎಂದು‌ ಮೊಯ್ಲಿ ಪುತ್ರನನ್ನು ಸದಾಶಿವ ಅಮೀನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಸದಾಶಿವ ಅಮೀನ್ ಅವರ ಖಡಕ್ ಮಾತಿಗೆ ನೀವು ಬಾಯಿ‌ ಮುಚ್ಚಿ ಎಂದು ಹರ್ಷ ಮೊಯ್ಲಿ ಹೇಳಿದ್ದಾರೆ. ನಾನು ಬಾಯಿ ಮುಚ್ಚಲು ನೀವು ಹೇಳಬೇಡಿ ಅಂತಾ ಕಾಂಗ್ರೆಸ್ ಉಪಾಧ್ಯಕ್ಷ ಸಿಟ್ಟುಗೊಂಡಿದ್ದಾರೆ. ಇದೀಗ ತುಳುವಿನಲ್ಲಿ ನಡೆದ ವಾಗ್ವಾದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ABOUT THE AUTHOR

...view details