ಉಡುಪಿ:ತಾಯಿ ನಿಧನರಾದ ವಿಷಯ ತಿಳಿದ ಗಂಟೆಯೊಳಗೆ ಮಗನೂ ಮೃತಪಟ್ಟ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನಡೆದಿದೆ. ಪ್ರಶಾಂತ್ ಶೇಟ್ ಹೃದಯಾಘಾತದಿಂದ ಮೃತಪಟ್ಟ ಪುತ್ರ.
ತಾಯಿಯ ಸಾವಿನ ಸುದ್ದಿ ತಿಳಿದು ಹೃದಯಾಘಾತದಿಂದ ಮೃತಪಟ್ಟ ಮಗ - death from heart attack
ಉಡುಪಿಯಲ್ಲಿ ಒಂದೇ ಗಂಟೆಯ ಅಂತರದಲ್ಲಿ ತಾಯಿ ಹಾಗೂ ಮಗ ಇಬ್ಬರೂ ಮೃತಪಟ್ಟ ಘಟನೆ ನಡೆದಿದೆ.
ತಾಯಿ ಸಾವು ಕೇಳಿ ಮಗನಿಗೆ ಹೃದಯಾಘಾತ
ಶಕುಂತಲಾ ಶೇಟ್ (82) ಜೂ. 12ರ ತಡರಾತ್ರಿ 12.45ಕ್ಕೆ ನಿಧನರಾಗಿದ್ದರು. ಒಂದೇ ಗಂಟೆಯೊಳಗೆ ಪುತ್ರ ಪ್ರಶಾಂತ್ ಶೇಟ್ (45) ಕೂಡಾ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಪ್ರಶಾಂತ್ ಕುಂದಾಪುರದ ಮಹಾರಾಜ್ ಜುವೆಲ್ಲರ್ನ ಮಾಲೀಕನಾಗಿದ್ದು, ಶಾಂತಿನಿಕೇತನ ವಾರ್ಡ್ನಲ್ಲಿ ವಾಸವಾಗಿದ್ದರು. ಚಿಕ್ಕನ್ಸಾಲ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಇಬ್ಬರ ಅಂತ್ಯಕ್ರಿಯೆ ನಡೆದಿದೆ.