ಉಡುಪಿ:ನಾಲ್ಕು ದಿನಗಳ ಹಿಂದೆ ಸೀತಾ ನದಿಗೆ ಈಜಲು ಹೋಗಿ ಕಾಲು ಜಾರಿಬಿದ್ದು ಸಾವನ್ನಪ್ಪಿದ್ದ ಯುವಕನ ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ.
ಈಜಲು ಹೋಗಿ ಸಾವನ್ನಪ್ಪಿದ ಯುವಕ: ನಾಲ್ಕು ದಿನದ ಬಳಿಕ ಮೃತದೇಹ ಪತ್ತೆ - ಚಾರ ಯುವಕನ ಮೃತ ದೇಹ ಪತ್ತೆ ನ್ಯೂಸ್
ನಾಲ್ಕು ದಿನದ ಹಿಂದೆ ಯುವಕನೋರ್ವ ಈಜಲು ಹೋಗಿ ನಾಪತ್ತೆಯಾಗಿದ್ದ ಘಟನೆ ಚಾರ ಕಲ್ಲಿಲ್ಲು ಬಹುಗ್ರಾಮ ನೀರಾವರಿ ಡ್ಯಾಮ್ ನಲ್ಲಿ ನಡೆದಿತ್ತು. ಸದ್ಯ ಯುವಕನ ಮೃತದೇಹ ಘಟನಾ ಸ್ಥಳದಿಂದ 300 ಮೀ. ದೂರದ ನದಿಯ ತೀರದಲ್ಲಿ ಪತ್ತೆಯಾಗಿದೆ.
ಈಜಲು ಹೋಗಿ ಸಾವನ್ನಪ್ಪಿದ್ದ ಯುವಕನ ಮೃತದೇಹ ಪತ್ತೆ
ಈ ಘಟನೆ ಚಾರ ಕಲ್ಲಿಲ್ಲು ಬಹುಗ್ರಾಮ ನೀರಾವರಿ ಡ್ಯಾಮ್ ನಲ್ಲಿ ನಡೆದಿತ್ತು.ಸಂತೋಷ್ ಮೃತಪಟ್ಟ ಯುವಕ. ಈತ ಸ್ಥಳೀಯ ನಿವಾಸಿಯಾಗಿದ್ದು, ಹೆಬ್ರಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ.
ಹೆಬ್ರಿ ಪೊಲೀಸರು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಾಪತ್ತೆಯಾದ ಮೃತದೇಹಕ್ಕಾಗಿ ನಾಲ್ಕು ದಿನಗಳಿಂದ ಶೋಧ ಕಾರ್ಯ ನಡೆಸಿದ್ದರು. ಇಂದು ಘಟನೆ ನಡೆದ ಸ್ಥಳದಿಂದ 300 ಮೀ. ದೂರದ ನದಿಯ ತೀರದಲ್ಲಿ ದೇಹ ಪತ್ತೆಯಾಗಿದೆ.