ಕರ್ನಾಟಕ

karnataka

ETV Bharat / state

ಉಡುಪಿ: ಸೂಪರ್ ಸ್ಪ್ರೆಡರ್ ಮಹಿಳೆ ಮೇಲೆ ಕ್ರಿಮಿನಲ್ ಪ್ರಕರಣಕ್ಕೆ ಡಿಸಿ ಸೂಚನೆ

ಲ್ಯಾಬ್​ ಟೆಕ್ನೀಷಿಯನ್ ಆಗಿದ್ದ 30 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು ಈ ಮಹಿಳೆ 6 ಮಂದಿಗೆ ಸೋಂಕು ಹರಡಲು ಕಾರಣಳಾಗಿದ್ದಳು. ತನ್ನ ಟ್ರಾವೆಲ್ ಹಿಸ್ಟರಿ ಬಚ್ಚಿಟ್ಟಿದ್ದ ಈಕೆ ಮುಂಬೈನಿಂದ ಬಂದಿದ್ದವರ ಜೊತೆ ಕಾಯರ್ಯಕ್ರಮದಲ್ಲಿ ಭಾಗಿಯಾಗಿದ್ದಳು.

DC notice for criminal case on Super Spreader woman
ಉಡುಪಿ: ಸೂಪರ್ ಸ್ಪ್ರೆಡರ್ ಮಹಿಳೆ ಮೇಲೆ ಕ್ರಿಮಿನಲ್ ಪ್ರಕರಣಕ್ಕೆ ಡಿಸಿ ಸೂಚನೆ

By

Published : Jun 25, 2020, 12:10 AM IST

ಉಡುಪಿ‌: ಸೂಪರ್ ಸ್ಪ್ರೆಡರ್ (ಹೆಚ್ಚು ಜನರಿಗೆ ಸೋಂಕು ಹರಡಿಸುವವರು) ಮಹಿಳೆ ಮೇಲೆ ಕ್ರಿಮಿನಲ್ ಪ್ರಕರಣಕ್ಕೆ ಸೂಚನೆ ನೀಡಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ. ಲ್ಯಾಬ್ ಟೆಕ್ನೀಷಿಯನ್ ಆಗಿದ್ದ 30 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು ಈ ಮಹಿಳೆ 6 ಮಂದಿಗೆ ಸೋಂಕು ಹರಡಲು ಕಾರಣಳಾಗಿದ್ದಳು.

ಟ್ರಾವೆಲ್ ಹಿಸ್ಟರಿ ಬಚ್ಚಿಟ್ಟಿದ್ದ ಲ್ಯಾಬ್ ಟೆಕ್ನೀಷಿಯನ್​ ಮುಂಬೈ‌ನಿಂದ ಬಂದವರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಳು.ಈ ವಿಚಾರ ಹೇಳದೆ ಗೌಪ್ಯವಾಗಿರಿಸಿದ್ದ ಮಹಿಳೆಯಿಂದ ಆರು‌ ಮಂದಿಗೆ ಸೋಂಕು ದೃಢವಾಗಿದೆ.

ಮಗ(5), ಅಪ್ಪ(63), ಮಾವ (61), ನಾದಿನಿ(23), ಗರ್ಭಿಣಿ ತಂಗಿ(22) ಸಂಬಂಧಿ(32) ಗೆ ಸೋಂಕು ತಗುಲಿದೆ. ಸೋಂಕಿತರು ಯಾವುದೇ ವಿಚಾರ ಗೌಪ್ಯವಾಗಿ ಇಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details