ಕರ್ನಾಟಕ

karnataka

By

Published : Jan 13, 2021, 7:54 AM IST

Updated : Jan 13, 2021, 11:25 AM IST

ETV Bharat / state

ಕೊರೊನಾ ಲಸಿಕೆ ಇಟಲಿಯಿಂದ ಬಂದಿದ್ದರೆ ಬಹಳ ಒಳ್ಳೆಯದು ಅಂತಿದರೇನೋ; ಸಿ.ಟಿ ರವಿ ವ್ಯಂಗ್ಯ

ಲಸಿಕೆ ಇಟಲಿ ಅಥವಾ ಚೀನಾದಿಂದ ಬಂದರೆ ಮಾತ್ರ ಇವರು ಒಳ್ಳೆಯದು ಅಂತಾರೆ. ಆದರೆ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ನಮ್ಮ ದೇಶದಲ್ಲಿಯೇ ತಯಾರಾದ ಲಸಿಕೆ ಬಗ್ಗೆ ಅವರಿಗೆ ಮಾತ್ರ ನಂಬಿಕೆ ಇಲ್ಲ.

CT Ravi
ಸಿ.ಟಿ ರವಿ

ಉಡುಪಿ:ಭಾರತದಲ್ಲಿ ತಯಾರಾದ ಲಸಿಕೆ ಬಗ್ಗೆ ವಿರೋಧ ಪಕ್ಷಗಳಿಗೆ ನಂಬಿಕೆ ಇಲ್ಲ. ಇಟಲಿಯಿಂದ ಬಂದಿದ್ದರೆ ಬಹಳ ಒಳ್ಳೆಯದು ಅಂತಿದ್ರು ಅಂತಾ ಬಿಜೆಪಿ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್​ಗೆ ವ್ಯಂಗ್ಯವಾಡಿದ ಸಿ.ಟಿ ರವಿ

ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ದುರ್ದೈವ. ನಮ್ಮ ದೇಶದಲ್ಲಿ ತಯಾರಾದ ಔಷಧದ ಬಗ್ಗೆ ಅಪಪ್ರಚಾರ ಮಾಡುವುದು ಷಡ್ಯಂತ್ರ. ಅಪಪ್ರಚಾರದಲ್ಲಿ ಕೆಲ ಪಕ್ಷಗಳು ತೊಡಗಿಸಿಕೊಂಡಿರುವುದು ದುರ್ದೈವಾಗಿದೆ. ತಾವು ಮಾಡೋದಿಲ್ಲ, ಮಾಡುವವರಿಗೆ ಬಿಡುವುದಿಲ್ಲ ಈ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಹೀಗೆ ಮಾಡುವ ಪಕ್ಷವನ್ನು ಜನ ದೇಶದ ರಾಜಕಾರಣದಿಂದ ಅಳಿಸಿ ಹಾಕುತ್ತಾರೆ ಎಂದರು.

ಲಸಿಕೆ ಇಟಲಿ ಅಥವಾ ಚೀನಾದಿಂದ ಬಂದರೆ ಮಾತ್ರ ಇವರು ಒಳ್ಳೆಯದು ಅಂತಾರೆ. ಆದರೆ, ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ನಮ್ಮ ದೇಶದಲ್ಲಿಯೇ ತಯಾರಾದ ಲಸಿಕೆಯ ಬಗ್ಗೆ ಅವರಿಗೆ ಮಾತ್ರ ನಂಬಿಕೆ ಇಲ್ಲ. ಆದ್ರೆ ಈ ದೇಶದ ಜನರ ಓಟು ಬೇಕು. ದೇಶದಲ್ಲಿ ತಯಾರಾದ ಔಷಧ ಬಗ್ಗೆ ನಂಬಿಕೆ ಇಲ್ಲ. ನಮ್ಮ ದೇಶದ ವಿಜ್ಞಾನಿಗಳ ಬಗ್ಗೆಯೂ ಅವರಿಗೆ ಗೌರವ ಇದ್ದಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಕೊಗನೊಳ್ಳಿ ಟೋಲ್ ಗೇಟ್ ಪ್ರವೇಶ ಮಾಡಿದ ಕೋವಿಶೀಲ್ಡ್

ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಮಾತನಾಡಿದ ಅವರು, ನನಗಿರೋ ಮಾಹಿತಿ ಪ್ರಕಾರ ನಾಳೆ ಸಚಿವ ಸಂಪುಟ ವಿಸ್ತರಣೆ ಆಗುತ್ತೆ. ಅಧಿಕೃತವಾಗಿ ಮುಖ್ಯಮಂತ್ರಿಗಳು ಹೇಳಬೇಕಷ್ಟೇ. ಯೋಗ್ಯತೆ ಇರುವವರು ನಮ್ಮ ಪಕ್ಷದಲ್ಲಿ ಬಹಳ ಜನ ಇದ್ದಾರೆ. ಆದರೆ ಮಂತ್ರಿಯಾಗುವ ಯೋಗ ಯಾರಿಗಿದೆ ನಾಳೆ ನೋಡೋಣ ಅಂತಾ ಅವರು ಹೇಳಿದ್ರು.

Last Updated : Jan 13, 2021, 11:25 AM IST

ABOUT THE AUTHOR

...view details