ಉಡುಪಿ: ಜಿಲ್ಲೆಯ ಹಿರಿಯಡ್ಕದಲ್ಲಿ ಹಾಡಹಗಲೇ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹಿರಿಯಡ್ಕ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ಈ ಕೃತ್ಯ ಎಸಗಿದೆ.
ಹಾಡಹಗಲೇ ಯುವಕನ ಬರ್ಬರ ಹತ್ಯೆ: ಬೆಚ್ಚಿಬಿದ್ದ ಉಡುಪಿ - udupi news
ಹಿರಿಯಡ್ಕ ಸಿಂಡಿಕೇಟ್ ಬ್ಯಾಂಕ್ ಮುಂಭಾಗ ಯುವಕನೋರ್ವನನ್ನು ದುಷ್ಕರ್ಮಿಗಳು ಕೊಂದಿದ್ದಾರೆ. ಘಟನೆಗೆ ಹಳೆಯ ವೈಷಮ್ಯವೇ ಕಾರಣ ಎಂದು ಹೇಳಲಾಗುತ್ತಿದೆ.
ಕಾಪು ತಾಲೂಕಿನ ಇನ್ನ ಗ್ರಾಮದ ಕಿಶನ್ ಹೆಗ್ಡೆ ಕೊಲೆಯಾದ ಯುವಕ. ತನ್ನ ಗೆಳೆಯನ ಜೊತೆ ಕಾರಿನಲ್ಲಿ ಕುಳಿತಿದ್ದಾಗ ಉಡುಪಿ ಕಡೆಯಿಂದ ಕಾರಿನಲ್ಲಿ ಬಂದ ಎಂಟು ದುಷ್ಕರ್ಮಿಗಳು ಕೊಲೆ ಮಾಡದ್ದಾರೆ. ಇದಕ್ಕೂ ಮೊದಲು ಈ ಗುಂಪು ಹಾಗೂ ಕಿಶನ್ ನಡೆವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
ಕಿಶನ್ ಹೆಗ್ಡೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ. ಹಾಗೆ ಸಣ್ಣಪುಟ್ಟ ಅಪರಾಧಿ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಳೇ ವೈಷಮ್ಯಕ್ಕೆ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಹಿರಿಯಡ್ಕ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.