ಕರ್ನಾಟಕ

karnataka

ETV Bharat / state

ಬಸ್​ನೊಳಗೆಯೇ ವಿಷಕುಡಿದ ದಂಪತಿ: ಆತ್ಮಹತ್ಯೆಗೆ ಪ್ರಯತ್ನಿಸಿದ್ಯಾಕೆ? - ತಮಿಳುನಾಡಿ ದಂಪತಿಗಳಿಂದ ವಿಷಸೇವನೆ

ಕೊಲ್ಲೂರಿನಲ್ಲಿ ಪೂಜೆ ಮುಗಿಸಿ ಬರುತ್ತಿದ್ದಾಗ ಬಸ್​ನಲ್ಲೇ ಇವರು ವಿಷಸೇವನೆ ಮಾಡಿದ್ದಾರೆ. ಘಟನೆ ಹಿನ್ನೆಲೆ ಬಸ್​ ಚಾಲಕ ಬಸ್​ನ್ನು ಎಲ್ಲಿಯೂ ನಿಲ್ಲಿಸದೆ ನೇರವಾಗಿ ಕುಂದಾಪುರ ಆಸ್ಪತ್ರೆ ಚಲಾಯಿಸಿಕೊಂಡು ಬಂದು ಮಾನವೀಯತೆ ಮೆರೆದಿದ್ದಾನೆ.

ಬಸ್​ನೊಳಗೆಯೇ ವಿಷಕುಡಿದ ದಂಪತಿಗಳು,  Couple poisoned inside the bus at Udupi
ಬಸ್​ನೊಳಗೆಯೇ ವಿಷಕುಡಿದ ದಂಪತಿಗಳು

By

Published : Jan 10, 2020, 10:03 AM IST

Updated : Jan 10, 2020, 10:43 AM IST

ಉಡುಪಿ: ಕೊಲ್ಲೂರು ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್​ನಲ್ಲಿ ದಂಪತಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ತಮಿಳುನಾಡು ಮೂಲದವರಾದ ರಾಜ್ ಕುಮಾರ್(35), ಸಂಗೀತಾ(28) ವಿಷ ಕುಡಿದವರು. ಕೊಲ್ಲೂರಿನಿಂದ ಉಡುಪಿಗೆ ಪ್ರಯಾಣಿಸುವ ಬಸ್​ನಲ್ಲಿ ಈ ಘಟನೆ ಜರುಗಿದ್ದು, ದಂಪತಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಕೊಲ್ಲೂರಿನಲ್ಲಿ ಪೂಜೆ ಮುಗಿಸಿ ಬರುತ್ತಿದ್ದಾಗ ಬಸ್​ನಲ್ಲೇ ಇವರು ವಿಷಸೇವನೆ ಮಾಡಿದ್ದಾರೆ. ಘಟನೆ ಹಿನ್ನೆಲೆ ಬಸ್​ ಚಾಲಕ ಬಸ್​ನ್ನು ಎಲ್ಲಿಯೂ ನಿಲ್ಲಿಸದೆ ನೇರವಾಗಿ ಕುಂದಾಪುರ ಆಸ್ಪತ್ರೆ ಚಲಾಯಿಸಿಕೊಂಡು ಬಂದು ಮಾನವೀಯತೆ ಮೆರೆದಿದ್ದಾನೆ.

ಬಸ್​ನೊಳಗೆಯೇ ವಿಷಕುಡಿದ ದಂಪತಿ

ದಂಪತಿಗಳಿಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿಗಳಿಬ್ಬರು ತಮಿಳುನಾಡು ಮೂಲದವರಾಗಿದ್ದು, ಉಡುಪಿಯ ಅಂಬಲಪಾಡಿ ಟೆಂಟ್ ನಲ್ಲಿ ವಾಸವಾಗಿದ್ದರು. ಇವರಿಗೆ ಒಂದೂವರೆ ವರ್ಷದ ಮಗ ಇದ್ದಾನೆ.

Last Updated : Jan 10, 2020, 10:43 AM IST

ABOUT THE AUTHOR

...view details