ಕರ್ನಾಟಕ

karnataka

ETV Bharat / state

ಕೊರೊನಾ ವೈರಸ್ ಹಿನ್ನೆಲೆ: ಚೀನಾದಿಂದ ಉಡುಪಿಗೆ ಬಂದ ನಾಲ್ವರ ತಪಾಸಣೆ - ಉಡುಪಿ ಕೊರೊನಾ ವೈರಸ್​ ಪ್ರಕರಣ

ಚೀನಾಕ್ಕೆ ತೆರಳಿದ್ದ ಉಡುಪಿ ಮೂಲದ ಕುಟುಂಬದ ಮೂವರು ಸದಸ್ಯರು ಸೇರಿದಂತೆ ನಾಲ್ವರನ್ನು ಜಿಲ್ಲಾಸ್ಪತ್ರೆಯ ಐಸೋಲೇಟೆಡ್ ವಾರ್ಡ್‌ಗೆ ದಾಖಲಿಸಿ ತಪಾಸಣೆಗೊಳಪಡಿಸಲಾಗಿದೆ.

corona-virus-an-inspection-of-four-attire-from-china
ಕೊರೊನಾ ವೈರಸ್

By

Published : Feb 7, 2020, 11:16 PM IST

Updated : Feb 7, 2020, 11:56 PM IST

ಉಡುಪಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಚೀನಾದಿಂದ ಉಡುಪಿಗೆ ಬಂದ ನಾಲ್ವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ಗೊಳಪಡಿಸಲಾಗಿದೆ.

ಇಬ್ಬರಿಗೆ ಸಾಮಾನ್ಯ ಶೀತ, ಕೆಮ್ಮು ಕಂಡುಬಂದಿದ್ದು ಮುಂಜಾಗರೂಕತಾ ಕ್ರಮವಾಗಿ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ನಾಲ್ವರು ಕೂಡಾ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ರೋಗಿಗಳ ರಕ್ತದ ಸ್ಯಾಂಪಲ್‌ನ್ನು ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ವರದಿಯ ನಿರೀಕ್ಷೆಯಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರಿದ್ದಾರೆ.

Last Updated : Feb 7, 2020, 11:56 PM IST

ABOUT THE AUTHOR

...view details