ಉಡುಪಿ: ಅಜೆಕಾರು ಠಾಣೆ ಎಎಸ್ಐಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಠಾಣೆಯನ್ನು 48 ಗಂಟೆಗಳ ಕಾಲ ಖಾಲಿ ಬಿಡಲು ನಿರ್ಧರಿಸಲಾಗಿದೆ.
ಕಾರ್ಕಳ ತಾಲೂಕಿನ ಅಜೆಕಾರು ಪೊಲೀಸ್ ಠಾಣೆ ಈಗ ಅಜೆಕಾರು ಅಂಗನವಾಡಿಯಲ್ಲಿ ತನ್ನ ಕಾರ್ಯನಿರ್ವಹಿಸಿತ್ತಿದೆ. ಅಂಗನವಾಡಿ ಬೋರ್ಡ್ ಮೇಲೆ ಪೊಲೀಸ್ ಠಾಣೆ ಬೋರ್ಡ್ಅನ್ನು ಪೊಲೀಸರು ನೇತು ಹಾಕಿದ್ದಾರೆ. ಅಜೆಕಾರು ಅಂಗನವಾಡಿಯನ್ನು ಪೊಲೀಸ್ ಠಾಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಸದ್ಯ ಪೊಲೀಸ್ ಠಾಣೆಯನ್ನು ಪೊಲೀಸರು ಸ್ಯಾನಿಟೈಸ್ ಮಾಡಿಸುತ್ತಿದ್ದಾರೆ.
ಅಜೆಕಾರು ಠಾಣೆ ಎಎಸ್ಐಗೆ ಕೊರೊನಾ ಮತ್ತೊಂದೆಡೆ ಜಿಲ್ಲೆಯ ಕಾಪು ತಾಲೂಕಿನ ಸೋಂಕಿತ ವ್ಯಕ್ತಿ ಹೇರ್ ಕಟಿಂಗ್ ಮಾಡಿಸಿದ್ದಕ್ಕೆ ತಾಲೂಕಿನಾದ್ಯಂತ ಸಲೂನ್ಗಳನ್ನು ಬಂದ್ ಮಾಡಲಾಗಿದೆ. ಉಡುಪಿ ಜಿಪಂನ ಹೊರಗುತ್ತಿಗೆ ನೌಕರನಿಗೆ ಸೋಂಕು ತಗುಲಿರುವುದು
ಸೋಮವಾರ ದೃಢಪಟ್ಟಿದೆ. ಸೋಂಕಿತ ವ್ಯಕ್ತಿ ಕಟಪಾಡಿಯ ಸರಕಾರಿ ಗುಡ್ಡೆ ನಿವಾಸಿಯಾಗಿದ್ದು, ವಾರದ ಹಿಂದಷ್ಟೇ ಸರಕಾರಿ ಗುಡ್ಡೆಯಲ್ಲಿ ಕ್ಷೌರ ಮಾಡಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಸಲೂನ್ ಮಾಲೀಕರು ಸೋಂಕು ಹಬ್ಬದಿರಲು ಸೆಲೂನ್ ಬಂದ್ ಮಾಡಲು ನಿರ್ಧರಿಸಿದ್ದಾರೆ.