ಉಡುಪಿ: ಪಡುಬಿದ್ರಿ ಠಾಣೆಯ 10 ಮಂದಿ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಠಾಣೆಯನ್ನು ಪಕ್ಕದ ಬೋರ್ಡ್ ಶಾಲೆಗೆ ಸ್ಥಳಾಂತರವಾಗಿದೆ.
ಠಾಣೆಯಲ್ಲಿ ಹುಟ್ಟುಹಬ್ಬ ಆಚರಣೆ:10 ಮಂದಿ ಪೊಲೀಸರಿಗೆ ಕೊರೊನಾ - ಪಡುಬಿದ್ರಿ ಪೊಲೀಸ್ ಠಾಣೆ
ಪಡುಬಿದ್ರಿ ಠಾಣೆಯ 10 ಮಂದಿ ಪೊಲೀಸರಿಗೆ ಕೊರೊನಾ ವಕ್ಕರಿಸಿದ್ದು, ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ.
10 ಮಂದಿ ಪೊಲೀಸರಿಗೆ ಕೊರೊನಾ
ಎಸ್ಐ ಸಹಿತ 10 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಎಲ್ಲ ಸೋಂಕಿತ ಪೊಲೀಸರು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. 24 ಗಂಟೆ ಕಾಲ ಪಡುಬಿದ್ರಿ ಠಾಣೆ ಸೀಲ್ಡೌನ್ ಆಗಲಿದೆ.
ಠಾಣೆಯಲ್ಲಿ ಕೆಲ ದಿನಗಳ ಹಿಂದೆ ಪೊಲೀಸ್ ಹುಟ್ಟು ಹಬ್ಬದ ಆಚರಿಸಲಾಗಿತ್ತು. ಬರ್ತ್ ಡೇ ಪ್ರಯುಕ್ತ ಔತಣ ಕೂಟ ಮಾಡಿ ವಾರದೊಳಗೆ ಸಿಬ್ಬಂದಿಯೊಬ್ಬರಿಗೆ ಜ್ವರ ಕಾಣಿಸಿಕೊಂಡಿದೆ. ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ಪಕ್ಕಾ ಆಗಿದೆ.