ಉಡುಪಿ:ಕುಂದಾಪುರದಲ್ಲಿ ಮೂವರು ಪೊಲೀಸರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಎಎಸ್ಪಿ ಕಚೇರಿ ಸಿಬ್ಬಂದಿಗೆ ಕೊರೊನಾ ಬಂದಿದ್ದು, ಟ್ರಾಫಿಕ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸರಿಗೂ ಸೋಂಕು ದೃಢವಾಗಿದೆ. ಹೈವೇ ಗಸ್ತು ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಚಾಲಕ ಸಿಬ್ಬಂದಿ ಕೊರೊನಾ ದೃಢವಾಗಿದೆ. ಈ ಹಿನ್ನೆಲೆ ಎಎಸ್ಪಿ ಕಚೇರಿ ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಕುಂದಾಪುರದಲ್ಲಿ ಮೂವರು ಪೊಲೀಸರಿಗೆ ಕೋವಿಡ್ ಪಾಸಿಟಿವ್ - ಉಡುಪಿಯಲ್ಲಿ ಕೊರೊನಾ ಹೆಚ್ಚಳ,
ಕುಂದಾಪುರದಲ್ಲಿ ಮೂವರು ಪೊಲೀಸರಿಗೆ ಕೊರೊನಾ ದೃಢಪಟ್ಟಿದ್ದು, ಎಎಸ್ಪಿ ಕಚೇರಿಯನ್ನು ಸ್ಥಳಾಂತರಿಸಲಾಗಿದೆ.

ಕುಂದಾಪುರದಲ್ಲಿ ಮೂವರು ಪೊಲೀಸರಿಗೆ ಕೋವಿಡ್ ಪಾಸಿಟಿವ್
ಸೋಂಕು ದೃಢಗೊಂಡ ಎಎಸ್ಪಿ ಕಚೇರಿ ಸಿಬ್ಬಂದಿ ಜುಲೈ2 ರಿಂದ ಹೋಂ ಕ್ವಾರಂಟೈನ್ನಲ್ಲಿದ್ದರು. ಟ್ರಾಫಿಕ್ ಠಾಣೆ ಎಎಸ್ಐ ಹಾಗೂ ಸಿಬ್ಬಂದಿ ಜುಲೈ5 ರಿಂದ ಕ್ವಾರೆಂಟೈನ್ನಲ್ಲಿ ಇದ್ದರು. ಇನ್ನು ಎಎಸ್ಪಿ ಕಚೇರಿ ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಗೆ ಸ್ಥಳಾಂತರವಾಗಿದೆ.