ಕರ್ನಾಟಕ

karnataka

ETV Bharat / state

ಜಿಲ್ಲಾಡಳಿತದ ಎಡವಟ್ಟು: ಕ್ವಾರಂಟೈನ್ ಮುಗಿಸಿ ಹೋದ ಯುವಕನಿಗೆ ಕೊರೊನಾ! - ಯುವಕನಿಗೆ ಕೊರೊನಾ ಪಾಸಿಟಿವ್

ಯುವಕ ಮೂರು ದಿನಗಳ ಹಿಂದೆ‌ ಕ್ವಾರಂಟೈನ್ ‌ಮುಗಿಸಿ ಮನೆಗೆ ಅಗಮಿಸಿದ್ದು, ವರದಿ ಕೈ ಸೇರುವ ಮುನ್ನವೇ ಕ್ವಾರಂಟೈನ್ ನಲ್ಲಿದ್ದವರನ್ನು ಬಿಡುಗಡೆಗೊಳಿಸುವ ಮೂಲಕ ಜಿಲ್ಲಾಡಳಿತ ಮತ್ತೆ ಎಡವಟ್ಟು ಮಾಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Karkala corona
Karkala corona

By

Published : May 31, 2020, 8:43 PM IST

ಕಾರ್ಕಳ: ಕ್ವಾರಂಟೈನ್‌ ಅವಧಿ ಮುಗಿಸಿ ಬಿಡುಗಡೆಯಾಗಿ ಮನೆ ಸೇರಿದ ಯುವಕನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಇನ್ನಾ ಗ್ರಾಮದ ಬಗ್ಗರಗುತ್ತು, ಮಡ್ಮಣ್ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಸಿಲಾಗಿದೆ.

ಗ್ರಾಮದ 25 ವರ್ಷದ ಯುವಕ ಮುಂಬೈನ ಖಾಸಗಿ ಕಂಪನಿವೊಂದರಲ್ಲಿ ‌ಕೆಲಸ‌ ಮಾಡುತ್ತಿದ್ದ. ಮೇ14ರಂದು ತನ್ನ ಸ್ನೇಹಿತರೊಂದಿಗೆ ಮುಂಬೈಯಿಂದ ಊರಿಗೆ ಅಗಮಿಸಿದ್ದ.

ನಿಯಮದಂತೆ ಹೆಬ್ರಿ ಕ್ವಾರಂಟೈನ್ ‌ಕೇಂದ್ರಕ್ಕೆ‌ ಒಳಪಡಿಸಲಾಗಿತ್ತು. ಕಳೆದ‌ ಮೂರು ದಿನಗಳ ಹಿಂದೆ ಕ್ವಾರಂಟೈನ್​ನಿಂದ ಬಿಡುಗಡೆಯಾಗೆ ಮನೆಗೆ ವಾಪಸ್​ ಆಗಿದ್ದ. ಇದೀಗ ಯುವಕನ ವರದಿಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೆ ಕೋವಿಡ್ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಟ್ರಾವೆಲ್ ಹಿಸ್ಟರಿ:

ಕ್ವಾರಂಟೈನ್ ‌ಕೇಂದ್ರದಿಂದ ಬಿಡುಗಡೆಗೊಳಿಸಿದ ವೇಳೆ ಆತ ತನ್ನ ಸ್ನೇಹಿತರ ಜೊತೆ‌ ಕಾರಿನಲ್ಲಿ ‌ಮುನಿಯಾಲು‌ವರೆಗೆ ಆಗಮಿಸಿ‌, ಅಲ್ಲಿಂದ ಇನ್ನಾ ಗ್ರಾಮದವರೆಗೆ ಆಟೋದಲ್ಲಿ ಮನೆ ಸೇರಿದ್ದಾನೆ. ಈ ವೇಳೆ ಯುವಕನ ಜೊತೆ‌ ಕ್ವಾರಂಟೈನ್​​‌ನಲ್ಲಿದ್ದ ಸ್ನೇಹಿತನ ಕಾರಿನಲ್ಲಿ ಬಂದಿದ್ದು‌, ಈ ವೇಳೆ ಸೋಂಕು ‌‌ತಗುಲಿರಬಹುದಾಗಿ ಶಂಕಿಸಲಾಗಿದೆ.

ಸ್ಥಳಕ್ಕೆ ಕಾರ್ಕಳ ತಹಶೀಲ್ದಾರ್, ಗ್ರಾಮ ಪಂಚಾಯಿತಿ ಪಿಡಿಒ, ಗ್ರಾಮಕರಣಿಕರು ಭೇಟಿ ನೀಡಿದ್ದಾರೆ.

ಯುವಕ ಮೂರು ದಿನಗಳ ಹಿಂದೆ‌ ಕ್ವಾರಂಟೈನ್ ‌ಮುಗಿಸಿ ಮನೆಗೆ ಅಗಮಿಸಿದ್ದು, ವರದಿ ಕೈ ಸೇರುವ ಮುನ್ನವೇ ಕ್ವಾರಂಟೈನ್ ನಲ್ಲಿದ್ದವರನ್ನು ಬಿಡುಗಡೆಗೊಳಿಸುವ ಮೂಲಕ ಜಿಲ್ಲಾಡಳಿತ ಮತ್ತೆ ಎಡವಟ್ಟು ಮಾಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details