ಉಡುಪಿ :ಕೋವಿಡ್ ಎರಡನೇ ಅಲೆ ಹಿನ್ನೆಲೆ ಉಡುಪಿ- ಮಣಿಪಾಲದಲ್ಲಿ ಇಂದಿನಿಂದ ಕೊರೊನಾಕರ್ಪ್ಯೂ ಜಾರಿ ಮಾಡಲಾಗಿದೆ. ಇಂದಿನಿಂದ ಏಪ್ರಿಲ್ 20 ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕೊರೊನಾ ಕರ್ಪ್ಯೂ ಜಾರಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಉಡುಪಿ- ಮಣಿಪಾಲದಲ್ಲಿ ಇಂದು ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕೊರೊನಾ ಕರ್ಫ್ಯೂ ಜಾರಿಯಾಗಿದೆ. ಕರ್ಫ್ಯೂ ಅವಧಿಯಲ್ಲಿ ವೈದ್ಯಕೀಯ ಸೇವೆ ಹೊರತುಪಡಿಸಿ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧವಿದೆ. ರೋಗಿಗಳು ಮತ್ತು ಅವರ ಸಹಾಯಕರಿಗೆ ಮಾತ್ರ ಸಂಚರಿಸಲು ಅವಕಾಶವಿದೆ ಎಂದರು.
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಓದಿ : ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 45 ಚೆಕ್ ಪೋಸ್ಟ್: ಶಶಿಕುಮಾರ್ ಎನ್.
ಕಂಪೆನಿ, ಫ್ಯಾಕ್ಟರಿಗಳಲ್ಲಿ ರಾತ್ರಿ ಪಾಳಿಗೆ ಕೆಲಸಕ್ಕೆ ಹೋಗುವವರು ರಾತ್ರಿ 10 ಗಂಟೆ ಮೊದಲು ಹೋಗಿ ಬೆಳಗ್ಗೆ 5 ಗಂಟೆ ನಂತರ ಹೊರಬರಬೇಕು. ಯಾವುದಾದರು ಇ- ಕಾಮರ್ಸ್ ಹಾಗೂ ಹೋಂ ಡೆಲಿವರಿ ಕರ್ತವ್ಯ ನಿರ್ವಹಿಸುವವರು ಡೆಲಿವರಿ ಕೊಟ್ಟು ಬರಬಹುದು. ಮುಖ್ಯವಾಗಿ ರೈಲು, ಬಸ್ ಮೂಲಕ ದೂರ ಪ್ರಯಾಣಕ್ಕೆ ಹೋಗುವವರು ಟಿಕೆಟ್ ಇಟ್ಟುಕೊಂಡು ಸಂಚರಿಸಬಹುದು. ನಿಲ್ದಾಣಕ್ಕೆ ಹೋಗುವವರು ಆಟೋ ಕ್ಯಾಬ್ಗಳಲ್ಲಿ ಮಾತ್ರ ತೆರಳಬೇಕು ಎಂದು ತಿಳಿಸಿದರು.