ಕರ್ನಾಟಕ

karnataka

ETV Bharat / state

ಸಿಎಎ ವಿರುದ್ಧ ಉಡುಪಿಯಲ್ಲಿ ಬೃಹತ್​ ಪ್ರತಿಭಟನಾ ಸಮಾವೇಶ: ಕೇಂದ್ರದ ವಿರುದ್ಧ ಕಿಡಿ - protest in udupi

ನಗರದ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಸಿಎಎ ವಿರುದ್ಧ ನಡೆದ ಸಾರ್ವಜನಿಕ ಪ್ರತಿಭಟನಾ ಸಮಾವೇಶದಲ್ಲಿ ಸಾವಿರಾರು ಜನ ಪ್ರಗತಿಪರರು, ಸಮಾನ ಮನಸ್ಕ ಸಂಘಟನೆಗಳು, ದಲಿತ ಸಂಘಟನೆಗಳು, ಮುಸ್ಲಿಂ ಸಂಘಟನೆಗಳ ಸದಸ್ಯರು, ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಭಾಗಿಯಾಗಿದ್ದರು. ಈ ವೇಳೆ

convention-against-caa-in-udupi
convention-against-caa-in-udupiconvention-against-caa-in-udupi

By

Published : Jan 30, 2020, 11:41 PM IST

ಉಡುಪಿ: ನಗರದ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಸಿಎಎ ವಿರುದ್ಧ ನಡೆದ ಸಾರ್ವಜನಿಕ ಪ್ರತಿಭಟನಾ ಸಮಾವೇಶದಲ್ಲಿ ಸಾವಿರಾರು ಜನ ಪ್ರಗತಿಪರರು, ಕಾಂಗ್ರೆಸ್​ ಮುಖಂಡರು, ಸಮಾನಮನಸ್ಕ ಸಂಘಟನೆಗಳು, ದಲಿತ ಸಂಘಟನೆಗಳು, ಮುಸ್ಲಿಂ ಸಂಘಟನೆಗಳ ಸದಸ್ಯರು ಭಾಗಿಯಾಗಿದ್ದರು.

ಸಿಎಎ ವಿರುದ್ಧ ಸಮಾವೇಶ

ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತೇನೆ. ಏಕೆಂದರೆ, ಇವತ್ತು ದೇಶದ ಎಲ್ಲಿ ನೋಡಿದ್ರೂ ರಾಷ್ಟ್ರಧ್ವಜ ಕಾಣಿಸ್ತಿದೆ. ಸ್ವಾತಂತ್ರ್ಯ ಕಾಲದಲ್ಲಂತೂ ನಾವು ಇರಲಿಲ್ಲ. ಈಗ ನಾವು ಸಾಯೋ ಕಾಲಕ್ಕೆ ಇಷ್ಟು ಧ್ವಜಗಳನ್ನು ನೋಡುವ ಅವಕಾಶ ಸಿಕ್ಕಿದೆ ಎಂದು ಕುಟುಕಿದರು. ನಮಗೆ ಕೇಸರಿ ಬಟ್ಟೆ, ಧ್ವಜ ನೋಡಿ ಸಾಕಾಗಿತ್ತು. ಆದರೆ ಈಗ ರಾಷ್ಟ್ರಧ್ವಜ ನೋಡುವ ಭಾಗ್ಯ ಒದಗಿ ಬಂದಿದೆ ಎಂದರು. ಮುಸ್ಲಿಂರನ್ನು ಅನುಮಾನದಿಂದ ನೋಡಬೇಡಿ ಎಂದು ಮನವಿ ಮಾಡಿದ ರಮೇಶ್ ಕುಮಾರ್, ಹಾಗೆ ಮಾಡಿದರೆ ಭಾರತ ಮಾತೆ ಕಣ್ಣೀರು ಹಾಕುತ್ತಾಳೆ ಎಂದರು.

ನಂತರ ಹೋರಾಟಗಾರ್ತಿ ಅಮೂಲ್ಯ ಮಾತನಾಡಿ, ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ವಿರುದ್ಧ ಗುಡುಗಿದರು. ಭಾಷಣದ ಭರದಲ್ಲಿ ಕಾಂಗ್ರೆಸ್ ಕೂಡ ಹಲವಾರು ಹಗರಣಗಳನ್ನು ನಡೆಸಿದೆ ಎನ್ನುವ ಮೂಲಕ ವೇದಿಕೆಯಲ್ಲಿದ್ದ ಕಾಂಗ್ರೆಸಿಗರಿಗೆ ಮುಜುಗರ ಆಗುವಂತೆ ಮಾಡಿದರು.

ಸಮಾವೇಶದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

ABOUT THE AUTHOR

...view details