ಕರ್ನಾಟಕ

karnataka

ETV Bharat / state

ಕೈ ನಾಯಕರು ಮೊದಲು ತಮ್ಮ ಪಕ್ಷವನ್ನು ಉಳಿಸಿಕೊಳ್ಳಲಿ: ಸದಾನಂದಗೌಡ ತಿರುಗೇಟು - ಉಡುಪಿಯ ಅದಮಾರು ಪರ್ಯಾಯದ ಸಭಾ ಕಾರ್ಯಕ್ರಮ

ಕಾಂಗ್ರೆಸ್ ನಾಯಕರು ಮೊದಲು ಒಡೆದು ನುಚ್ಚುನೂರಾಗಿರುವ ಪಕ್ಷವನ್ನು ಉಳಿಸಿಕೊಳ್ಳಲಿ. ಬಳಿಕ ದೇಶದ ಬಗ್ಗೆ ಮಾತನಾಡಲಿ ಎಂದು ಕೇಂದ್ರ ಸಚಿವ ಸದಾನಂದಗೌಡ ಕೈ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Kn_04_19_gunduravo_byte_7202200_avb
ಕೈ ನಾಯಕರು ನುಚ್ಚು ನೂರಾಗಿರುವ ತಮ್ಮ ಪಕ್ಷವನ್ನು ಉಳಿಸಿಕೊಳ್ಳಲಿ: ಸದಾನಂದಗೌಡ ತಿರುಗೇಟು

By

Published : Jan 20, 2020, 9:15 AM IST

ಉಡುಪಿ:ಕಾಂಗ್ರೆಸ್ ನಾಯಕರು ಮೊದಲು ಒಡೆದು ನುಚ್ಚುನೂರಾಗಿರುವ ಪಕ್ಷವನ್ನು ಉಳಿಸಿಕೊಳ್ಳಲಿ. ಬಳಿಕ ದೇಶದ ಬಗ್ಗೆ ಮಾತನಾಡಲಿ ಎಂದು ಕೇಂದ್ರ ಸಚಿವ ಸದಾನಂದಗೌಡ ಕೈ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಕೈ ನಾಯಕರು ನುಚ್ಚುನೂರಾಗಿರುವ ತಮ್ಮ ಪಕ್ಷವನ್ನು ಉಳಿಸಿಕೊಳ್ಳಲಿ: ಸದಾನಂದಗೌಡ ತಿರುಗೇಟು

ಉಡುಪಿಯ ಅದಮಾರು ಪರ್ಯಾಯದ ಸಭಾ ಕಾರ್ಯಕ್ರಮಕ್ಕೆ ಸದಾನಂದಗೌಡ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಮಠಕ್ಕೆ ಬಂದಿದ್ದರು. ಸಿಎಎ ಬಗ್ಗೆ ಮಾತನಾಡಿದ ಅವರು, ಈ ಕಾಯ್ದೆ ದೇಶ ಒಡೆಯುವ ಕೆಲಸ ಮಾಡುತ್ತಿದೆ. ಕಾನೂನಿನ ಬಗ್ಗೆ ಬಿಜೆಪಿಯ ನಾಯಕರಲ್ಲೇ ಸ್ಪಷ್ಟತೆ ಇಲ್ಲ. ಕಾಯ್ದೆ ಜಾರಿಯಾದರೆ ಗಲಭೆಗಳು ನಡೆಯಬಹುದು ಎಂದು ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

ಇದಕ್ಕೆ ಉತ್ತರಿಸಿದ ಸದಾನಂದಗೌಡ, ಸಿಎಎ ಕಾಯ್ದೆ ಮೇಲ್ಮನೆ ಮತ್ತು ಕೆಳ ಮನೆಗಳಲ್ಲಿ ಅಂಗೀಕಾರವಾದ ಕಾನೂನು. ಅದನ್ನು ಜಾರಿ ಮಾಡುವುದಿಲ್ಲ ಅನ್ನೋದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡುವ ಅಪಮಾನ. ಕೇರಳ ಮುಖ್ಯಮಂತ್ರಿಯನ್ನು ನಾನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೇನೆ. ಕೇಂದ್ರದ ಕಾನೂನನ್ನು ಜಾರಿ ಮಾಡುವುದಿಲ್ಲ ಎಂದಿರುವ ಅವರು ಸಿಎಂ ಸ್ಥಾನದಲ್ಲಿ ಮುಂದುವರೆಯಲು ಯೋಗ್ಯರಲ್ಲ. ಕಳೆದ ಐದಾರು ವರ್ಷಗಳಿಂದ ಮೋದಿ ಸರ್ಕಾರವನ್ನು ಟೀಕಿಸಲು ಒಂದೇ ಒಂದು ವಿಚಾರಗಳು ಇವರಿಗೆ ಸಿಕ್ಕಿಲ್ಲ. ಈಗ ಈ ವಿಚಾರವನ್ನು ಇರಿಸಿಕೊಂಡು ಅಪಪ್ರಚಾರದಲ್ಲಿ ತೊಡಗಿದ್ದಾರೆ. ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಗಾದಿಗೆ ಹಲವಾರು ಜನರು ಲಾಬಿ ನಡೆಸುತ್ತಿದ್ದಾರೆ. ಒಬ್ಬರು ದಿಲ್ಲಿಯಿಂದ ಬರುತ್ತಿದ್ದಂತೆ ಮತ್ತೊಬ್ಬರು ದಿಲ್ಲಿಯ ವಿಮಾನ ಹತ್ತುತ್ತಾರೆ. ಸ್ವಂತ ಪಕ್ಷವನ್ನು ಉಳಿಸಲಾಗದವರು ದೇಶದ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ABOUT THE AUTHOR

...view details