ಕಾರ್ಕಳ: ನಕ್ಸಲ್ ಮುಖ್ಯ ಆರಕ್ಷಕ ಆನಂದ ಎಸ್. ಪಾಟೀಲ್ ಎಂಬುವರು ನಕ್ಸಲ್ ನಿಗ್ರಹ ಕ್ಯಾಂಪ್ಅನ್ನು ಇಟ್ಟು ಸ್ಫೋಟಿಸುವುದಾಗಿ ಪಹರೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಬೆದರಿಕೆವೊಡ್ಡಿದ ಪ್ರಕರಣ ಬೆಳಕಿಗೆ ಬಂದಿದೆ.
ನಕ್ಸಲ್ ಮುಖ್ಯ ಆರಕ್ಷಕ ಆನಂದ ಎಂಬುವರು ಅಂಜಿ ಎಂಬ ಹೆಸರಿನ ಶ್ವಾನವನ್ನು ಹಿಡಿದುಕೊಂಡು ಎ.ಎನ್.ಎಫ್ ಕ್ಯಾಂಪ್‌ನ ಗೇಟ್‌ನ ಎದುರು ಅಡ್ಡಲಾಗಿ ಕುಳಿತುಕೊಂಡು, ತಮ್ಮ ಬಳಿ ಇದ್ದ ಇಲಾಖೆ ಪಿಸ್ತೂಲನ್ನು ಹೊರತೆಗೆದು ಯಾವುದೋ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವೈಷಮ್ಯದಿಂದ ಎ.ಎನ್.ಎಫ್ ಕ್ಯಾಂಪ್‌ನ ಗೇಟ್ ಬಳಿ ಪಹರೆ ಕರ್ತವ್ಯದಲ್ಲಿದ್ದ ಸಿಬ್ಬಂದಿಯವರಿಗೆ ಬೆದರಿಗೆ ಹಾಕಿದ್ದಾರೆ. ಬಳಿಕ ಪೊಲೀಸ್ ನಿರೀಕ್ಷಕಾದ ಸುನಿಲ್ ಅವರು ಆರೋಪಿ ಆನಂದನನ್ನು ಸಮಾಧಾನ ಪಡಿಸಿ ಪಿಸ್ತೂಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ.