ಕರ್ನಾಟಕ

karnataka

ETV Bharat / state

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್: ವ್ಯಕ್ತಿಯ ಬಂಧನ - ಬೈಂದೂರು ಮೂಲದ ವ್ಯಕ್ತಿಯ ಬಂಧನ

ಕೋಮು ಪ್ರಚೋದನೆ ಆರೋಪದಡಿ ಬೈಂದೂರು ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.

Udupi
ಉಡುಪಿ

By

Published : Aug 5, 2022, 2:14 PM IST

ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಹಿನ್ನೆಲೆ ಬೈಂದೂರು ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಲಕ್ಷ್ಮೀಕಾಂತ ಬೈಂದೂರು ಬಂಧಿತ ವ್ಯಕ್ತಿ.

ಈತ ಫೇಸ್ ಬುಕ್ ಖಾತೆಯಲ್ಲಿ ಫಾಜಿಲ್ ಹತ್ಯೆಯ ಆರೋಪಿಗಳನ್ನು ಹೀರೋಗಳು ಎಂದು ಬರೆದಿದ್ದ. ಅಲ್ಲದೇ, ಪ್ರವೀಣ್ ಹತ್ಯೆಗೆ ಪ್ರತೀಕಾರ ಹೇಗಿತ್ತು?, ಒಬ್ಬ ಪ್ರವೀಣ್​​ಗೆ ಒಬ್ಬ ಫಾಜಿಲ್ ಸಾಕಾಗಲ್ಲ ಎಂದು ಬರೆದಿದ್ದ. ಕೋಮು ಪ್ರಚೋದನೆ ಆರೋಪಡಿ ಉಡುಪಿ ಜಿಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಎಸ್​ಪಿ ಖಡಕ್ ಎಚ್ಚರಿಕೆ: ಕೋಮು ಪ್ರಚೋದನೆ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವವರ ವಿರುದ್ಧ ಶೀಘ್ರ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಉಡುಪಿ ಎಸ್​ಪಿ ವಿಷ್ಣುವರ್ಧನ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ವಾಟ್ಸಪ್​​ನಲ್ಲಿ ಕೋಮು ಪ್ರಚೋದನೆ ವಿಡಿಯೋ.. ಇಬ್ಬರ ಬಂಧನ

ABOUT THE AUTHOR

...view details