ಕರ್ನಾಟಕ

karnataka

ETV Bharat / state

ಅಲೆಗೆ ಸಿಲುಕಿದ್ದ ಮೀನುಗಾರ‌ನನ್ನು ರಕ್ಷಿಸಿದ ಕೋಸ್ಟ್​​ ಗಾರ್ಡ್​ ಸಿಬ್ಬಂದಿ - ಮೀನುಗಾರನ ರಕ್ಷಣೆ

ಕಡಲಿನಲ್ಲಿ ಅಬ್ಬರದ ಅಲೆಗಳಿಗೆ ಸಿಲುಕಿದ್ದ ಒರಿಸ್ಸಾ ಮೂಲದ ಮೀನುಗಾರನನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಮೀನುಗಾರ‌ನ ರಕ್ಷಣೆ

By

Published : Oct 24, 2019, 8:55 PM IST

ಉಡುಪಿ:ಮೀನುಗಾರಿಕೆಗೆಂದು ತೆರಳಿ ಕಾಣೆಯಾಗಿದ್ದ ಮೀನುಗಾರನೋರ್ವನನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಅ. 23ರಂದು ಕರಾವಳಿ ಕೋಸ್ಟ್ ಗಾರ್ಡ್ ಮಾಹಿತಿ ಮೇರೆಗೆ ಉಡುಪಿ ಮಲ್ಪೆ ಲೈಟ್ ಹೌಸ್ ಬಳಿ ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಕಡಲ ಅಬ್ಬರ ಜೋರಾಗಿದ್ದು, ಈ ನಡುವೆ ಅಲೆಯ ಅಬ್ಬರಕ್ಕೆ ಸಿಲುಕಿದ್ದ ಒರಿಸ್ಸಾ ಮೂಲದ 33 ವರ್ಷದ ಮೀನುಗಾರ ಗೊರಾಯ್ ರಾವ್ ಎಂಬಾತನನ್ನು ರಕ್ಷಣೆ ಮಾಡಲಾಗಿದೆ.

ರಕ್ಷಣೆ ಮಾಡಿದ ಬಳಿಕ ತೀವ್ರವಾಗಿ ಬಳಲಿದ್ದ ಮೀನುಗಾರನಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಕೋಸ್ಟ್​ ಗಾರ್ಡ್ ಇಲಾಖೆ ತಿಳಿಸಿದ್ದು, ಮೀನುಗಾರ ಸುರಕ್ಷಿತವಾಗಿದ್ದಾನೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details