ಕರ್ನಾಟಕ

karnataka

ETV Bharat / state

ಅಂಗಾಂಗ ದಾನಕ್ಕೆ ಸಹಿ ಹಾಕುವೆ, ಜೀವಗಳ ಉಳಿಸುವ ಕಾರ್ಯಕ್ಕೆ ಮುಂದಾಗೋಣ: ಸಿಎಂ ಬೊಮ್ಮಾಯಿ

ನಮ್ಮೆಲ್ಲರಿಂದ ಇನ್ನೊಂದು ಜೀವವನ್ನು ಉಳಿಸಲು ಸಾಧ್ಯವಿದ್ದರೆ ಆ ಮಹತ್ವದ ಕೆಲಸವನ್ನೇಕೆ ಮಾಡಬಾರದು?. ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದು, ಇತರರು ಕೂಡ ಸಹಿ ಹಾಕಬೇಕೆಂದು ಕರೆ ಕೊಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

CM basavaraja bommai
ಸಿಎಂ ಬಸವರಾಜ ಬೊಮ್ಮಾಯಿ

By

Published : Aug 13, 2021, 10:45 AM IST

Updated : Aug 13, 2021, 11:11 AM IST

ಉಡುಪಿ: ಇತ್ತೀಚಿಗೆ ಅಂಗಾಂಗ ಕಸಿ ಮಾಡುವ ತಂತ್ರಜ್ಞಾನ ಬಂದಿದ್ದು, ಯಶಸ್ವಿಯಾಗುತ್ತಿದೆ. ಅಂಗಾಂಗ ದಾನ ಮಾಡುವುದರಿಂದ ಜೀವ ಉಳಿಸಬಹುದು. ಹಾಗಾಗಿ, ಹೆಚ್ಚಿನ ಜನರು ಈ ಕೆಲಸಕ್ಕೆ ಮುಂದೆ ಬರಬೇಕು. ಇದರಿಂದ ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಿದೆ. ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರು ಕೂಡ ಸಹಿ ಹಾಕಬೇಕೆಂದು ಕರೆ ಕೊಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ

ಉಡುಪಿಯಲ್ಲಿ ಮಾತನಾಡಿದ ಅವರು, ನಿಮ್ಮಿಂದ ಇನ್ನೊಂದು ಜೀವ ಉಳಿಸಲು ಸಾಧ್ಯವಿದ್ದರೆ ಯಾಕೆ ಆ ಕೆಲಸ ಮಾಡಬಾರದು?. ಎಲ್ಲರೂ ಕೂಡ ಈ ಕುರಿತು ಸಂಕಲ್ಪ ಮಾಡೋಣ. ಅಂಗಾಂಗಗಳು ಇನ್ನೊಬ್ಬರ ಉಪಯೋಗಕ್ಕೆ ಬರಲಿ ಎಂದು ತಿಳಿಸಿದರು.

ಇದನ್ನೂ ಓದಿ:ಪೆಟ್ರೋಲ್ ಬಂಕ್​ನಲ್ಲಿದ್ದ ಜನರ ನಡುವೆಯೇ ಕಳ್ಳನ ಕೈಚಳಕ: ಸಿಸಿಟಿವಿ ವಿಡಿಯೋ

ಕೋವಿಡ್‌ ನಿಯಂತ್ರಣ ಬಗ್ಗೆ ಇಂದೇ ತುರ್ತು ಸಭೆ

ಕೊರೊನಾ ಕುರಿತು ಮಾತನಾಡುತ್ತಾ, ತಜ್ಞರ ಸಲಹೆ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಬೆಂಗಳೂರಿಗೆ ತೆರಳಿದ ತಕ್ಷಣ ತಜ್ಞರ ಜೊತೆ ಮಾತನಾಡುವೆ. ಈ ಕುರಿತ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಇಂದೇ ತಜ್ಞರ ತುರ್ತು ಸಭೆ ಕರೆಯುತ್ತೇನೆ ಎಂದರು.

Last Updated : Aug 13, 2021, 11:11 AM IST

ABOUT THE AUTHOR

...view details