ಉಡುಪಿ:ಉಡುಪಿ ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಚೈನ್ ಸ್ನಾಚರ್ ಅರೆಸ್ಟ್ ಆಗಿದ್ದಾನೆ.
ನಿರ್ಜನ ಪ್ರದೇಶದಲ್ಲಿ ಸಂಚರಿಸುವ ಮಹಿಳೆಯರೇ ಇವನ ಟಾರ್ಗೆಟ್ ಆಗಿದ್ದು, ಈತನ ಮೇಲೆ ಉಡುಪಿ ನಗರ-4, ಮಣಿಪಾಲ-2, ಪಡುಬಿದ್ರಿ, ಕದ್ರಿ, ಮೂಲ್ಕಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಆರೋಪಿ ಇನ್ನಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಂಶಯವಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.