ಕರ್ನಾಟಕ

karnataka

ETV Bharat / state

ಮಲ್ಪೆ ಮೀನುಗಾರರ ಮೇಲೆ ದಾಳಿ ಪ್ರಕರಣ: ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು - Case Registerd against Maharastra fishermen in Udupi

ಮಲ್ಪೆಯಿಂದ ತೆರಳಿದ್ದ ನಾಲ್ಕು ಬೋಟುಗಳ ಮೇಲೆ ಮಹಾರಾಷ್ಟ್ರದಿಂದ 40 ಕಿಮೀ ದೂರದ ಸಮುದ್ರ ಮಧ್ಯದಲ್ಲಿ ಅಲ್ಲಿನ ಮೀನುಗಾರರು ದಾಳಿ ಮಾಡಿದ್ದರು. ಕಷ್ಟ ಪಟ್ಟು ಹಿಡಿದಿದ್ದ ಸುಮಾರು ಎಂಟು ಲಕ್ಷ ಮೌಲ್ಯದ ಮೀನನ್ನು ದೋಚಿಕೊಂಡು ಹೋಗಿದ್ದರು. ಈ ಪ್ರಕರಣ ಸಂಬಂಧ  ಮಲ್ಪೆ ಕರಾವಳಿ ಕಾವಲು ಪಡೆ ಹಾಗೂ ಮಲ್ಪೆ ಪೊಲೀಸರಿಗೆ ಸ್ಥಳೀಯ ಮೀನುಗಾರರು ದೂರು ನೀಡಿದ್ದಾರೆ.

ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು

By

Published : Oct 17, 2019, 9:51 PM IST

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಆಳ ಸಮುದ್ರ ಬೋಟುಗಳ ಮೇಲೆ ಮಹಾರಾಷ್ಟ್ರ ಮೀನುಗಾರರು ದಾಳಿ ಮಾಡಿ ಮೀನು ದೋಚಿರುವ ಘಟನೆ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು

ಮಲ್ಪೆಯಿಂದ ತೆರಳಿದ್ದ ನಾಲ್ಕು ಬೋಟ್​​ಗಳ ಮೇಲೆ ಮಹಾರಾಷ್ಟ್ರದಿಂದ 40 ಕಿಮೀ ದೂರದ ಸಮುದ್ರ ಮಧ್ಯದಲ್ಲಿ ಅಲ್ಲಿನ ಮೀನುಗಾರರು ದಾಳಿ ಮಾಡಿದ್ದರು. ಕಷ್ಟ ಪಟ್ಟು ಹಿಡಿದಿದ್ದ ಸುಮಾರು ಎಂಟು ಲಕ್ಷ ಮೌಲ್ಯದ ಮೀನುಗಳನ್ನ ದೋಚಿಕೊಂಡು ಹೋಗಿದ್ದರು. ಈ ಪ್ರಕರಣ ಸಂಬಂಧ ಮಲ್ಪೆ ಕರಾವಳಿ ಕಾವಲು ಪಡೆ ಹಾಗೂ ಮಲ್ಪೆ ಪೊಲೀಸರಿಗೆ ಸ್ಥಳೀಯ ಮೀನುಗಾರರು ದೂರು ನೀಡಿದ್ದಾರೆ.

ಸಮುದ್ರ ಮದ್ಯದಲ್ಲಿ ಕರ್ನಾಟಕದ ಮೀನುಗಾರರ ಮೇಲೆ ಪದೇ ಪದೇ ದಾಳಿ ನಡೆಯುತ್ತಿದ್ದು, ಕಠಿಣ ಕ್ರಮ ಜರುಗಿಸುವಂತೆ ಮೀನುಗಾರರು ಒತ್ತಾಯಿಸಿದ್ದಾರೆ.

ABOUT THE AUTHOR

...view details