ಉಡುಪಿ: ಕಾರನ್ನು ರಿವರ್ಸ್ ತೆಗೆಯುವಾಗ ಕಾರು ಅಚಾನಕ್ ಆಗಿ ಬಾವಿಗೆ ಬಿದ್ದಿರುವ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಖ್ಯಾತ ಶ್ರೀಕೃಷ್ಣ ಪಂಚಾಂಗ ಕರ್ತೃ ಶ್ರೀನಿವಾಸ ಅಡಿಗರ ಕಾರು ಅವರ ಮನೆಯ ಬಾವಿಗೆ ಬಿದ್ದಿದೆ.
ಬಾವಿಗೆ ಬಿದ್ದ ಕಾರು.. ಚಾಲಕಿ ಪಾರು ..! - ಉಡುಪಿ
ಶ್ರೀನಿವಾಸ ಅಡಿಗರ ಸೊಸೆ ಕಾರನ್ನು ರಿವರ್ಸ್ ತೆಗೆಯುವಾಗ ಬ್ರೇಕ್ ಬದಲಿಗೆ ಎಕ್ಸಲೇಟರ್ ಒತ್ತಿದ ಪರಿಣಾಮ ಈ ಅವಾಂತರ ಸಂಭವಿಸಿದೆ. ಒಮ್ಮೆಲೇ ವೇಗವಾಗಿ ಹಿಮ್ಮುಖ ಚಲಿಸಿದ ಕಾರು ನೇರ ಮನೆಯ ಬಾವಿಗೆ ಬಿದ್ದಿದೆ.
![ಬಾವಿಗೆ ಬಿದ್ದ ಕಾರು.. ಚಾಲಕಿ ಪಾರು ..! ರಿವರ್ಸ್ ತೆಗೆಯುವಾಗ ಬಾವಿಗೆ ಬಿದ್ದ ಕಾರು](https://etvbharatimages.akamaized.net/etvbharat/prod-images/768-512-12014750-thumbnail-3x2-udp.jpg)
ರಿವರ್ಸ್ ತೆಗೆಯುವಾಗ ಬಾವಿಗೆ ಬಿದ್ದ ಕಾರು
ರಿವರ್ಸ್ ತೆಗೆಯುವಾಗ ಬಾವಿಗೆ ಬಿದ್ದ ಕಾರು
ಶ್ರೀನಿವಾಸ ಅಡಿಗರ ಸೊಸೆ ಕಾರನ್ನು ರಿವರ್ಸ್ ತೆಗೆಯುವಾಗ ಬ್ರೇಕ್ ಬದಲಿಗೆ ಎಕ್ಸಲೇಟರ್ ಒತ್ತಿದ ಪರಿಣಾಮ ಈ ಅವಾಂತರ ಸಂಭವಿಸಿದೆ. ಒಮ್ಮೆಲೇ ವೇಗವಾಗಿ ಹಿಮ್ಮುಖ ಚಲಿಸಿದ ಕಾರು ನೇರ ಮನೆಯ ಬಾವಿಗೆ ಬಿದ್ದಿದೆ. ಕಾರು ಹಿಮ್ಮುಖ ಚಲಿಸುವಾಗ ಕೆಳಗೆ ಹಾರಿದ ಚಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಕ್ರೇನ್ ಸಹಾಯದಿಂದ ಕಾರನ್ನು ಮೇಲೆತ್ತಲಾಗಿದೆ.