ಉಡುಪಿ :ಕ್ರಿಸ್‌ಮಸ್‌ಗೂ ಕೇಕ್‌ಗೂ ಅವಿನಾಭಾವ ಸಂಬಂಧ ಇದೆ. ಈ ಹಬ್ಬದಲ್ಲಿ ಹತ್ತಾರು ಬಗೆಯ ಕೇಕ್‌ಗಳನ್ನು ತಯಾರಿಸಲಾಗುತ್ತದೆ. ಕೇಕ್ ಮಿಕ್ಸಿಂಗ್ ಹಾಗೂ ಕೇಕ್ ತಯಾರಿಸುವುದೂ ಒಂದು ಕಲೆ. ಕ್ರಿಸ್‌ಮಸ್ ಸಮೀಪಿಸುತ್ತಿರುವ ಹಿನ್ನೆಲೆ ಉಡುಪಿಯಲ್ಲಿ ಕೇಕ್ ಮಿಕ್ಸಿಂಗ್ ಮಾಡುವ ಮೂಲಕ ಚಾಲನೆ ನೀಡಲಾಯಿತು.
ನಗರದ ಉದ್ಯಾವರ ಚರ್ಚ್ ಆವರಣದಲ್ಲಿ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ ನೇತೃತ್ವದಲ್ಲಿ ಹಾಗೂ ಬೇಕ್ ಸ್ಟುಡಿಯೋ ಸಹಕಾರದೊಂದಿಗೆ ಕ್ರಿಸ್‌ಮಸ್ ಹಬ್ಬಕ್ಕೆ ಪೂರ್ವಭಾವಿಯಾಗಿ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ನಡೆಯಿತು. ವಿವಿಧ ಬಗೆಯ ಹಣ್ಣುಗಳನ್ನು ಒಟ್ಟಿಗೆ ಸುರಿಯುವ ಮೂಲಕ ಕೇಕ್ ಮಿಕ್ಸಿಂಗ್ಗೆ ಚಾಲನೆ ನೀಡಲಾಯಿತು.