ಕರ್ನಾಟಕ

karnataka

ETV Bharat / state

ಸಿಎಎ, ಎನ್ಆರ್​​ಸಿ ವಿರೋಧಿಸಿ ಜ. 30ರಂದು ಉಡುಪಿಯಲ್ಲಿ ಪ್ರತಿಭಟನೆ - ಜಾತ್ಯಾತೀತ ಪಕ್ಷಗಳು ಮತ್ತು ಪ್ರಗತಿ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಸಿಎಎ, ಎನ್ಆರ್​​ಸಿ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಜ. 30ರಂದು ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲೆಯ ದಲಿತ ಸಂಘಟನೆ ಮುಖಂಡ ಸುಂದರ ಮಾಸ್ತರ್ ತಿಳಿಸಿದ್ದಾರೆ.

kn_udp_02_23_nrc_protest_7202200_avb_SD
ಸಿಎಎ, ಎನ್ಆರ್ ಸಿ ವಿರೋಧಿಸಿ ಜ.30 ರಂದು ಉಡುಪಿಯಲ್ಲಿ ಪ್ರತಿಭಟನೆ

By

Published : Jan 23, 2020, 8:52 AM IST

ಉಡುಪಿ:ಸಿಎಎ, ಎನ್ಆರ್​​ಸಿ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಜ. 30ರಂದು ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲೆಯ ದಲಿತ ಸಂಘಟನೆ ಮುಖಂಡ ಸುಂದರ ಮಾಸ್ತರ್ ತಿಳಿಸಿದ್ದಾರೆ.

ಸಿಎಎ, ಎನ್ಆರ್​ಸಿ ವಿರೋಧಿಸಿ ಜ. 30ರಂದು ಉಡುಪಿಯಲ್ಲಿ ಪ್ರತಿಭಟನೆ

ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್​​​ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಎಸ್ಪಿ ಕಚೇರಿಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಗುವುದು. ಕೇಂದ್ರ ಸರ್ಕಾರದ ವಿರುದ್ಧ ಜಾತ್ಯಾತೀತ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಪ್ರಮುಖ ಭಾಷಣಕಾರರಾಗಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಆಜಾದ್ ಆಗಮಿಸಲಿದ್ದಾರೆ. ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್, ಮಹೇಂದ್ರ ಕುಮಾರ್ ಕವಿತಾ ರೆಡ್ಡಿ, ಮೆಹರೋಜ್ ಖಾನ್ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details