ಕರ್ನಾಟಕ

karnataka

ETV Bharat / state

ಉದ್ಯಮಿ ವಸಿಷ್ಠ ಯಾದವ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ಅಂದರ್​ - ನಾಲ್ವರು ಆರೋಪಿಗಳು ಅಂದರ್​

ಉದ್ಯಮಿ ವಸಿಷ್ಠ ಯಾದವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ಧಾರೆ.

Businessman Vasishtha Yadav murder case
ಉದ್ಯಮಿ ವಸಿಷ್ಠ ಯಾದವ್ ಕೊಲೆ ಪ್ರಕರಣ

By

Published : Feb 12, 2020, 10:11 AM IST

ಉಡುಪಿ:ಮುಂಬೈ ಉದ್ಯಮಿ ವಸಿಷ್ಠ ಯಾದವ್ ಕೊಲೆ ಪ್ರಕರಣವನ್ನು ಭೇದಿಸಿರುವ ಹಿರಿಯಡ್ಕ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ಉದ್ಯಮಿ ವಸಿಷ್ಠ ಯಾದವ್ ಕೊಲೆ ಪ್ರಕರಣ

ವಸಿಷ್ಠ ಯಾದವ್ ಮಾಲಿಕತ್ವದ ಮಾಯಾ ಡೇ ಲೇಡಿಸ್ ಬಾರ್ ಅಂಡ್ ರೆಸ್ಟೋರೆಂಟ್ ಮಾಜಿ ಸಿಬ್ಬಂದಿ ಮೂಲತಃ ದಿಲ್ಲಿ ನಿವಾಸಿ ಸುಮಿತ್ ಮಿಶ್ರಾ, ಉಡುಪಿಯ ಎಕೆಎಂಎಸ್ ಬಸ್ ಸಿಬ್ಬಂದಿ ಅಬ್ದುಲ್ ಶಕೂರ್, ಅವಿನಾಶ್ ಕರ್ಕೇರ, ಮಹಮ್ಮದ್ ಶರೀಫ್ ಬಂಧಿತ ಆರೋಪಿಗಳು. ಮೃತ ವಸಿಷ್ಠ ಕೊಲೆಯಾಗುವುದಕ್ಕೂ ಮೊದಲು ಪತ್ನಿ ರೀತಾಳಿಗೆ ವಿಡಿಯೋ ಕರೆ ಮಾಡಿ ಸ್ನೇಹಿತರಾದ ಸೈಫ್ ಹಾಗೂ ಅಕ್ರಂ ಜೊತೆ ಇರೋದಾಗಿ ಹೇಳಿದ್ದರಂತೆ. ಇದರಿಂದ ಅನುಮಾನಗೊಂಡು ಸ್ನೇಹಿತರ ಮೇಲೆ ದೂರು ದಾಖಲು ಮಾಡಿದ್ದರು.

ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ.

ಪ್ರಕರಣದ ಹಿನ್ನೆಲೆ:

ಮುಂಬೈನಲ್ಲಿ ಹೊಟೇಲ್​ ಉದ್ಯಮ ನಡೆಸುತ್ತಿದ್ದ ಮೃತ ವಶಿಷ್ಠ ಫೆ. 07 ರಂದು ಉಡುಪಿಗೆ ಬಂದು ಲಾಡ್ಜ್​ವೊಂದರಲ್ಲಿ ಉಳಿದುಕೊಂಡಿದ್ರು. ಈ ವೇಳೆ ಆರೋಪಿಗಳು ವಸಿಷ್ಠರನ್ನು ಕಾರಿನಲ್ಲಿ ಕೆರದುಕೊಂಡು ಹೋಗಿ ಕುತ್ತಿಗೆ ಬಿಗಿದು ಹತ್ಯೆ ಮಾಡಿ ತಾಲೂಕಿನ ಹಿರಿಯಡ್ಕ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ಗ್ರಾಮದಲ್ಲಿ ಮೃತದೇಹವನ್ನು ತಂದು ಬೀಸಾಡಿದ್ದರು.

ABOUT THE AUTHOR

...view details