ಉಡುಪಿ: ನನ್ನ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದ ವ್ಯಕ್ತಿಯನ್ನು ನಂಬಿ ಸಿಎಫ್‌ಒ, ಸಿಇಒ ಮಾಡಿದೆ. ಆತನೇ ನನ್ನ ಬೆನ್ನಿಗೆ ಚೂರಿ ಹಾಕಿದ ಪರಿಣಾಮ ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಬೇಕಾಯಿತು ಎಂದು ಉದ್ಯಮಿ ಬಿ.ಆರ್.ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ತಾವು ನಡೆಸುತ್ತಿರುವ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ತಮ್ಮ ಬಗ್ಗೆ ಹಬ್ಬಿರುವ ವದಂತಿಗಳಿಗೆ ಬೇಸರ ವ್ಯಕ್ತಪಡಿಸಿ, ಭಾವುಕರಾಗಿ ಮಾತನಾಡಿದರು. ನನ್ನ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದ ವ್ಯಕ್ತಿಯನ್ನು ನಂಬಿ ಸಿಎಫ್‌ಒ, ಸಿಇಒ ಮಾಡಿದೆ. ಆತನೇ ನನ್ನ ಬೆನ್ನಿಗೆ ಚೂರಿ ಹಾಕಿದ ಪರಿಣಾಮ ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಬೇಕಾಯಿತು. ಆ ವ್ಯಕ್ತಿಯ ಬಗ್ಗೆ ನಾನು ಏನೂ ಹೇಳುವಂತಿಲ್ಲ. ಯಾಕಂದ್ರೆ ಅವನ ಮೇಲಿನ ಆರೋಪ ಸಾಬೀತಾಗಿಲ್ಲ. ಆದರೆ, ಜನರ ಆಶೀರ್ವಾದದಿಂದ ಈ ಎಲ್ಲ ಸಮಸ್ಯೆಗಳಿಂದ ನಾನು ಹೊರಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಬುದಾಬಿಯಲ್ಲಿರುವ ಎಂಎನ್ಸಿ ಕಂಪನಿ ಮುಳುಗಿ, ಕೇವಲ ಒಂದು ಡಾಲರ್ಗೆ ಹರಾಜಾದಾಗ ಶೆಟ್ಟರ ಯುಗ ಮುಗೀತು. ಇನ್ನೇನು ಅವರು ಬೀದಿಗೆ ಬಂದೇ ಬಿಟ್ರು ಅಂತಾನೇ ಭಾವಿಸಲಾಗಿತ್ತು. ಆದರೆ, ನಾನು ಸೋತಿರಬಹುದು ಆದರೆ ಸತ್ತಿಲ್ಲ. ದೇವರ ದಯೆಯಿಂದ ನನ್ನ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ. ನೀವು ಯಾರು ಊಹಿಸಿರದಷ್ಟು ಬಿ.ಆರ್.ಶೆಟ್ಟಿ ಆರ್ಥಿಕವಾಗಿ ಸಕ್ಷಮವಾಗಿದ್ದಾರೆ. ಹೊರದೇಶದಲ್ಲಿರುವ ನನ್ನ ಸಾಮ್ರಾಜ್ಯ ಹೋಗಿರಬಹುದು.