ಉಡುಪಿ:ಜಿಲ್ಲೆಯಲ್ಲಿ ಮತ್ತೊಂದು ದೋಣಿ ದುರಂತ ಸಂಭವಿಸಿದ್ದು, ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಂಗೋಳಿ ಬಂದರಿನ ಆದಿ ಆಂಜನೇಯ ಎಂಬ ದೋಣಿಯಲ್ಲಿ ನಾಲ್ವರು ಮೀನುಗಾರರು ಮರುವಂತೆಯ ಬಳಿ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಿದ್ದಾಗ ದೋಣಿ ಮಗುಚಿದೆ. ಪರಿಣಾಮ ನಾಲ್ವರು ಸಮುದ್ರಕ್ಕೆ ಹಾರಿದ್ದು, ಅಲ್ಲಿಂದ ಈಜಿ ದಡ ಸೇರಿದ್ದಾರೆ.
ಮರವಂತೆ ಬಳಿ ಮೀನುಗಾರಿಕ ದೋಣಿ ಮುಳುಗಡೆ ಬಳಿಕ ದಡದತ್ತ ಬಂದಿದ್ದ ದೋಣಿ ಮೇಲೆತ್ತಲು ತೆರಳಿದ್ದ ಮಾಲೀಕ ಶ್ರೀನಿವಾಸ ಕಾರ್ವಿ ಅವರ ಕಾಲಿನ ಮೇಲೆ ದೋಣಿ ಬಿದ್ದ ಪರಿಣಾಮ ಗಾಯವಾಗಿದೆ. ಬಳಿಕ ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವೇಳೆ ನಾಡ ದೋಣಿಯ ಎರಡು ಇಂಜಿನ್ಗಳು ಸಮುದ್ರದ ಪಾಲಾಗಿವೆ. ಪದೇ-ಪದೇ ಈ ರೀತಿಯ ಘಟನೆಗಳು ಕರಾವಳಿಯಲ್ಲಿ ಸಂಭವಿಸುತ್ತಿರುವುದರಿಂದ ಮೀನುಗಾರರಲ್ಲಿ ಆತಂಕ ಉಂಟಾಗಿದೆ.
ಇದನ್ನೂ ಓದಿ: ಉಡುಪಿ ಸಮುದ್ರದಲ್ಲಿ ನಾಡದೋಣಿ ದುರಂತ: ನಾಲ್ವರು ಮೀನುಗಾರರು ಕಣ್ಮರೆ