ಕರ್ನಾಟಕ

karnataka

ETV Bharat / state

ಉಡುಪಿಗೆ ಸಿಎಂ ಭೇಟಿ.. ಕಾಪುವಿನಲ್ಲಿ ಜನಸಂಕಲ್ಪ ಯಾತ್ರೆ - bjp jana sankalpa yatra

ಉಡುಪಿಯ ಕಾಪು ಪೇಟೆಯಲ್ಲಿ ಇಂದು ಬಿಜೆಪಿ ಜನ ಸಂಕಲ್ಪ ಯಾತ್ರೆ ನಡೆಯಲಿದ್ದು, ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಭಾಗಿಯಾಗಲಿದ್ದಾರೆ.

jana sankalpa yatra udupi
ಉಡುಪಿಗೆ ಸಿಎಂ ಬೇಟಿ: ಕಾಪುವಿನಲ್ಲಿ ಜನಸಂಕಲ್ಪ ಯಾತ್ರೆ

By

Published : Nov 7, 2022, 12:33 PM IST

Updated : Nov 7, 2022, 12:48 PM IST

ಉಡುಪಿ: ಉಡುಪಿಯ ಕಾಪು ಪೇಟೆಯಲ್ಲಿ ಜನ ಸಂಕಲ್ಪ ಸಮಾವೇಶಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಸಮಾವೇಶ ನಡೆಯುವ ಸ್ಥಳದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಶ್ವಾನದಳದಿಂದ ಸಮಾವೇಶದ ಪ್ರದೇಶವನ್ನು ಪರಿಶೀಲಿಸಲಾಗಿದೆ.

ಉಡುಪಿ ಹೆಲಿಪ್ಯಾಡ್ ನಿಂದ ಸಮಾವೇಶ ಸ್ಥಳಕ್ಕೆ ಆಗಮಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಾಥ್ ನೀಡಲಿದ್ದು, ಸಚಿವರಾದ ಆರ್ ಅಶೋಕ್, ಗೋವಿಂದ ಕಾರಜೋಳ, ವಿ.ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಉಡುಪಿಗೆ ಸಿಎಂ ಭೇಟಿ.. ಕಾಪುವಿನಲ್ಲಿ ಜನಸಂಕಲ್ಪ ಯಾತ್ರೆ

ಸಮಾವೇಶದಲ್ಲಿ ಮುಖ್ಯಮಂತ್ರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಸಾಶನ ಮಂಜೂರು ಮಾಡಿದ ಸಲುವಾಗಿ ದೈವ ನರ್ತಕರಿಂದ ವಿಶೇಷ ಗೌರವಾರ್ಪಣೆ ನಡೆಯಲಿದೆ. ಪರಿಶಿಷ್ಟ ಜಾತಿ ಪಂಗಡ ಮೀಸಲಾತಿ ಘೋಷಣೆ ಹಿನ್ನೆಲೆ ಸನ್ಮಾನ ಮಾಡಲಿದ್ದಾರೆ. ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಸಿಎಂ ಭೇಟಿ ನೀಡಲಿದ್ದು, ನಂತರ ಬೈಂದೂರಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ:ಸ್ವಚ್ಛತಾ ಕಾರ್ಮಿಕರ ಖಾಯಂಗೊಳಿಸಲು ಅಧಿಸೂಚನೆ: ಸಿಎಂ ಬೊಮ್ಮಾಯಿ

Last Updated : Nov 7, 2022, 12:48 PM IST

ABOUT THE AUTHOR

...view details