ಕಾರ್ಕಳ(ಉಡುಪಿ) : ಬೈಕ್ ಮತ್ತು ಪಿಕ್ಅಪ್ ನಡುವೆ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತ್ತಂಗಡಿ ಬಳಿ ನಡೆದಿದೆ. ಭುವನೇಂದ್ರ ಕಾಲೇಜಿನ ಮೆನನ್ (20 )ಮೃತಪಟ್ಟ ವಿದ್ಯಾರ್ಥಿ.
ಕಾರ್ಕಳದಿಂದ ಬೆಳ್ವಾಯಿ ಕಡೆಗೆ ಸಾಗುತಿದ್ದ ಪಿಕ್ ಅಪ್ ಎದುರಿನಿಂದ ಬರುತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನೆಲಕ್ಕೆಸೆಯಲ್ಪಟ್ಟಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.