ಕುಂದಾಪುರ:ವೇಗವಾಗಿ ಬಂದ ಕಾರೊಂದು ಬುಲೆಟ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟ ಘಟನೆ ಫೆ. 8ರ ತಡರಾತ್ರಿ ಕುಂದಾಪುರ ಚರ್ಚ್ ರಸ್ತೆಯ ಬಳಿ ನಡೆದಿದೆ.
ಮೃತರನ್ನು ಕುಂದಾಪುರ ನೇರಳೆಕಟ್ಟೆ ಮೂಲದ ಬುಲೆಟ್ ಸವಾರ ಕಿರಣ್ ಮೇಸ್ತಾ (24), ಕುಂದಾಪುರ ಕರ್ಕುಂಜೆ ಗ್ರಾಮದವರಾದ ಹಿಂಬದಿ ಸವಾರ ರವೀಂದ್ರ ಕುಮಾರ್ ಎಂದು ಗುರುತಿಸಲಾಗಿದೆ.
ಕುಂದಾಪುರ ಚರ್ಚ್ ರಸ್ತೆಯಲ್ಲಿ ಬೈಕ್-ಕಾರು ಅಪಘಾತ ಮಹಿಳೆಯೊಬ್ಬರು ತನ್ನ ಮಾರುತಿ ಅಲ್ಟೋ ಕಾರನ್ನು ಮದ್ದುಗುಡ್ಡೆ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದಿದ್ದಾರೆ. ಕುಂದಾಪುರ ಕಡೆಯಿಂದ ಮದ್ದುಗುಡ್ಡೆ ಕಡೆಗೆ ಬರುತ್ತಿದ್ದ ಬುಲೆಟ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಇಬ್ಬರು ಕೂಡ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಓದಿ: ರಿಂಗ್ ರಸ್ತೆಗಳಲ್ಲಿ ಅಪಘಾತ ಹೆಚ್ಚಳ: ಟ್ರಾಮಾ ಕೇರ್ ಸೆಂಟರ್ ನಿರ್ಮಾಣಕ್ಕೆ ಒತ್ತು
ಈ ಬಗ್ಗೆ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಲಾಯಿಸುತ್ತಿದ್ದ ಮಹಿಳೆಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.