ಉಡುಪಿ: ಕಾಪು ಬೀಚ್‌ನ ಪಾರ್ಕಿಂಗ್ ಏರಿಯಾದಲ್ಲಿ ಉಡ (ಒಡು)ವೊಂದು ಅನಿರೀಕ್ಷಿತವಾಗಿ ಕಾಣಿಸಿಕೊಂಡಿದ್ದು, ಪಾರ್ಕಿಂಗ್ ಪ್ರದೇಶದ ಸುತ್ತೆಲ್ಲಾ ಸಂಚರಿಸಿ ಪಾರ್ಕಿಂಗ್ ಬಳಿ ಇದ್ದ ಜನರನ್ನು ದಂಗಾಗುವಂತೆ ಮಾಡಿದೆ.
ಕಾಪು ಬೀಚ್ ಬಳಿ ಓಡೋಡಿ ಬಂದ ಅಪರೂಪದ ಅತಿಥಿ: ವಿಡಿಯೋ - ಉಡುಪಿ ಸಮುದ್ರ ಪ್ರದೇಶ
ಕಾಪು ಬೀಚ್‌ನ ವಾಹನ ಪಾರ್ಕಿಂಗ್ ಸ್ಟೇಷನ್ ಬಳಿ ಅಪರೂಪದ ಉಡವೊಂದು (Bengal monitor) ಕಾಣಿಸಿಕೊಂಡು ಅಚ್ಚರಿ ಮೂಡಿಸಿತು. ಉಡ ಕಂಡು ಅಲ್ಲಿದ್ದ ಜನ ಆತಂಕಗೊಂಡಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಉಡ ಸೆರೆಹಿಡಿದು ಅರಣ್ಯ ವ್ಯಾಪ್ತಿಗೆ ಬಿಟ್ಟಿದ್ದಾರೆ.
ಕಾಪು ಬೀಚ್ ಬಳಿ ಓಡೋಡಿ ಬಂದ ಅಪರೂಪದ ಅತಿಥಿ
ಕಾಪು ಲೈಟ್ ಹೌಸ್ ನಿರ್ವಹಣಾ ಸಮಿತಿಯ ಸಿಬ್ಬಂದಿ ಪ್ರಶಾಂತ್ ಕರ್ಕೇರ ಅವರು ಅರಣ್ಯ ಇಲಾಖೆ ಸಿಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅರಣ್ಯ ರಕ್ಷಕ ಮಂಜುನಾಥ್, ಅಭಿಲಾಷ್ ಸ್ಥಳೀಯರ ಸಹಕಾರದೊಂದಿಗೆ ಉಡ ಸೆರೆ ಹಿಡಿಯಲಾಗಿದೆ.
ಉಡ ಸೆರೆ ಹಿಡಿದು ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ಅವರ ಮಾರ್ಗದರ್ಶನದಲ್ಲಿ ಪಿಲಾರು ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.