ಕರ್ನಾಟಕ

karnataka

ETV Bharat / state

ಹೆಜ್ಜೇನು ದಾಳಿ: ಆರು ಮಹಿಳೆಯರ ಸ್ಥಿತಿ ಗಂಭೀರ - ಕೋಟ ಹೆಜ್ಜೇನು ದಾಳಿ ಸುದ್ದಿ

ಕೃಷಿ ಕಾರ್ಯದ ನಿಮಿತ್ತ ಗದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಆರು ಮಂದಿ ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಟದಲ್ಲಿ ನಡೆದಿದೆ.

bee attack at kota
ಹೆಜ್ಜೇನು ದಾಳಿ

By

Published : Dec 19, 2020, 3:58 PM IST

ಕೋಟ(ಉಡುಪಿ): ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಸನಗುಂದ ಪರಿಸರದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದ ಆರು ಮಹಿಳೆಯರ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.

ಹೆಜ್ಜೇನು ದಾಳಿಗೆ ಗಾಯಗೊಂಡಿರುವ ಮಹಿಳೆಯರು

ನಿನ್ನೆ ಸಂಜೆ ಕೃಷಿ ಕಾರ್ಯದ ನಿಮಿತ್ತ ಗದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಏಕಾಏಕಿ ಹೆಜ್ಜೇನು ಈ ಮಹಿಳೆಯರ ಮೇಲೆ ದಾಳಿ ಮಾಡಿದ್ದು, ಐವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಪ್ರೇಮ ಹಾಗೂ ಬುಡ್ಡು ಎಂಬುವರಿಗೆ ಹೆಜ್ಜೇನು ಅತಿಯಾಗಿ ಕಚ್ಚಿದ ಪರಿಣಾಮ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ:ಉಡುಪಿ ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿವೆ ಕಳ್ಳತನ ಪ್ರಕರಣ

ಇವರಲ್ಲಿ ಕಾವೇರಿ, ಪದ್ದು, ಸುಶೀಲ ಎಂಬುವರು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಚ್ಚಿ ಎಂಬುವರು ಕೋಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸರದ ಚಂದ್ರ ಪೂಜಾರಿ ಕದ್ರಿಕಟ್ಟು ಹಾಗೂ ಗೋವಿಂದ ಮರಕಾಲ, ಅಶೋಕ ಎನ್ನುವರು ಗ್ರಾಮಸ್ಥರ ನೆರವಿನೊಂದಿಗೆ ಆಸ್ಪತ್ರೆಗೆ ಸ್ಥಳಾಂತರಿಸುವಲ್ಲಿ ಸಹಕರಿಸಿದರು.

ABOUT THE AUTHOR

...view details