ಉಡುಪಿ :ಕಾಪು ಬೀಚ್ನಲ್ಲಿ ಸ್ನಾನಕ್ಕೆ ಇಳಿದ ನಾಲ್ವರು ಯುವಕರು ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಸಂದರ್ಭದಲ್ಲಿ ಬೀಚ್ ಸುರಕ್ಷಾ ಸಿಬ್ಬಂದಿ ಶನಿವಾರ ಸಂಜೆ ರಕ್ಷಿಸಿದ್ದಾರೆ.
ಇದನ್ನೂ ಓದಿ...ರಾಜಕೀಯಕ್ಕೆ ನಾನು ಸೂಟ್ ಆಗುವುದಿಲ್ಲ: ಪ್ರಮೋದಾ ದೇವಿ ಒಡೆಯರ್

ಮೈಸೂರು ಮೂಲದ ಪರಶಿವ, ತೇಜಸ್, ರಾಹುಲ್ ಮತ್ತು ಪವನ್ ಎಂಬುವರನ್ನು ಪ್ರಶಾಂತ್ ಕರ್ಕೇರಾ, ಪ್ರಥಮ್, ಪ್ರದೀಪ್, ಜೇಕ್ಸನ್ ಎಂಬುವರು ರಕ್ಷಿಸಿದ್ದಾರೆ. ಅಪಾಯಕಾರಿ ಅಲೆಗಳ ಕುರಿತು ಸಿಬ್ಬಂದಿ ಮಾಹಿತಿ ನೀಡಿದ್ದರೂ ಯುವಕರು ನಿರ್ಲಕ್ಷ್ಯವಹಿಸಿದ್ದರು.
ಯುವಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. ಮೂರ್ನಾಲ್ಕು ದಿನಗಳಿಂದ ಸಮುದ್ರದ ಅಲೆಗಳ ಅಬ್ಬರ ಜೋರಾಗಿದ್ದು, ಪ್ರವಾಸಿಗರು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಸ್ಥಳೀಯರು ತಿಳಿಸಿದ್ದಾರೆ.