ಕರ್ನಾಟಕ

karnataka

ETV Bharat / state

ಸೋಲಾರ್ ಬ್ಯಾಟರಿ ಕಳವು ಮಾಡುತ್ತಿದ್ದವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಯುವಕರು - Udupi Battery theft accused

ಇಂದು ಮುಂಜಾನೆ 5 ಗಂಟೆಗೆ ಸೋಲಾರ್ ಬ್ಯಾಟರಿ ಕಳವು ಮಾಡಲು ಬಂದ ಚೋರನೊಬ್ಬನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ..

Battery theft accused arrested in Udupi
ಸೆರೆ ಸಿಕ್ಕ ಸೋಲಾರ್ ಬ್ಯಾಟರಿ ಖದೀಮ

By

Published : Oct 30, 2020, 4:05 PM IST

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಬೆಳಪು ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಸೋಲಾರ್ ಬ್ಯಾಟರಿ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕೆಳತ್ತೂರು ನಿವಾಸಿ ಕಿರಣ್ (32)​ ಸಿಕ್ಕಿಬಿದ್ದ ಖದೀಮ.

ಸೆರೆ ಸಿಕ್ಕ ಸೋಲಾರ್ ಬ್ಯಾಟರಿ ಖದೀಮ

ವ್ಯಾಪಕ ಕಳ್ಳತನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರೇ ಸೇರಿ ಒಂದು ಕಾರ್ಯಪಡೆ ರಚಿಸಿದ್ದರು. ಖದೀಮರ ಕಳ್ಳತನದಿಂದ ಬೇಸತ್ತ ಯುವ ಪಡೆ ಕಳೆದ ಹಲವು ದಿನಗಳಿಂದ ಕಾರ್ಯಾಚರಣೆಯಲ್ಲಿ ತೊಡಿಗಿದ್ದರು.

ಸೆರೆ ಸಿಕ್ಕ ಸೋಲಾರ್ ಬ್ಯಾಟರಿ ಖದೀಮ

ಅಂದುಕೊಂಡಂತೆ ಇಂದು ಮುಂಜಾನೆ 5 ಗಂಟೆಗೆ ಸೋಲಾರ್ ಬ್ಯಾಟರಿ ಕಳವು ಮಾಡಲು ಬಂದ ಚೋರನನ್ನು ಸೆರೆ ಹಿಡಿದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಕಟ್ಟಿಹಾಕಿ ತಕ್ಷಣವೇ ಗ್ರಾಮ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ.

ಸೆರೆ ಸಿಕ್ಕ ಸೋಲಾರ್ ಬ್ಯಾಟರಿ ಖದೀಮ

ಸ್ಥಳಕ್ಕಾಗಮಿಸಿದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು, ಸರಣಿ ಕಳ್ಳತನದ ಬಗ್ಗೆ ಮಾಹಿತಿ ಪಡೆದು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯ ಸಹಿತ ಕದ್ದ ಬ್ಯಾಟರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಸೆರೆ ಸಿಕ್ಕ ಸೋಲಾರ್ ಬ್ಯಾಟರಿ ಖದೀಮ

ABOUT THE AUTHOR

...view details