ಉಡುಪಿ: 4 ವರ್ಷಗಳ ಹಿಂದೆ ಕರಾವಳಿಯನ್ನು ತಲ್ಲಣಗೊಳಿಸಿದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಲ್ಲಿ ಒಬ್ಬನಾದ ನಿರಂಜನ್ ಭಟ್ಗೆ ಜಿಲ್ಲಾ ಸೆಷನ್ಸ್ ಕೋರ್ಟ್ ಇಂದು ಶರತ್ತುಬದ್ಧ ಜಾಮೀನು ನೀಡಿದೆ.
ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗೆ ಷರತ್ತುಬದ್ಧ ಜಾಮೀನು - ಉಡುಪಿ ಕ್ರೈಮ್ ನ್ಯೂಸ್
ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಲ್ಲಿ ಒಬ್ಬನಾದ ನಿರಂಜನ್ ಭಟ್ಗೆ ಜಿಲ್ಲಾ ಸೆಷನ್ಸ್ ಕೋರ್ಟ್ ಶರತ್ತುಬದ್ಧ ಜಾಮೀನು ನೀಡಿದೆ.

2016 ಜುಲೈ 28ರಂದು ಉದ್ಯಮಿಯನ್ನು ಪತ್ನಿ ರಾಜೇಶ್ವರಿ ಶೆಟ್ಟಿ ಮತ್ತು ಮಗನೊಂದಿಗೆ ಸೇರಿ ನಿರಂಜನ್ ಭಟ್ ಕೊಲೆ ಮಾಡಿ ಸುಟ್ಟು ಹಾಕಿದ್ದ ಆರೋಪ ಎದುರಿಸುತ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರಂಜನ ಭಟ್ ತಂದೆ ಶ್ರೀನಿವಾಸ ಭಟ್ ಮತ್ತು ಕಾರು ಚಾಲಕ ಸೇರಿ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಮುಖ್ಯ ಆರೋಪಿ ರಾಜೇಶ್ವರಿ ಶೆಟ್ಟಿ ಈಗಾಗಲೇ ಜಾಮೀನು ಪಡೆದಿದ್ದು, ಭಾಸ್ಕರ್ ಶೆಟ್ಟಿ ಮಗ ನವನೀತ್ ಶೆಟ್ಟಿಗೆ ಜಾಮೀನು ದೊರೆಯಬೇಕಿದೆ. ನಿರಂಜನ ಭಟ್ನ ತಂದೆ ಶ್ರೀನಿವಾಸ ಭಟ್ 2 ದಿನದ ಹಿಂದೆ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆ ನಿರಂಜನ್ಗೆ ಜಿಲ್ಲಾ ನ್ಯಾಯಾಲಯ ಜುಲೈ 7ರ ತನಕ ಷರತ್ತುಬದ್ಧ ಜಾಮೀನು ನೀಡಿದೆ.