ಕರ್ನಾಟಕ

karnataka

ETV Bharat / state

ಬ್ಲ್ಯಾಕ್​ ಮೇಲ್​, ಜಾತಿ ನಿಂದನೆ ಆರೋಪ: ಹಲೋ ಕರಾವಳಿ ಪತ್ರಿಕೆ ಸಂಪಾದಕನ ಮೇಲೆ ಕೇಸ್​

ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿ, ಹಣ ವಸೂಲಿಗೆ ಯತ್ನಿಸಿದ ಆರೋಪದ ಮೇಲೆ ಹಾಯ್ ಕರಾವಳಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕನ ಮೇಲೆ ಪ್ರಕರಣ ದಾಖಲಾಗಿದೆ.

ಬ್ಯಾಕ್ ಮೇಲ್ ಪತ್ರಕರ್ತ ಅಮ್ಮ ರವಿ ಅರೆಸ್ಟ್

By

Published : Sep 20, 2019, 11:24 PM IST

ಉಡುಪಿ: ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿ, ಹಣ ವಸೂಲಿಗೆ ಯತ್ನಿಸಿದ ಆರೋಪದ ಮೇಲೆ ಹಾಯ್ ಕರಾವಳಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕನ ಮೇಲೆ ಪ್ರಕರಣ ದಾಖಲಾಗಿದೆ.

ಅಮ್ಮ ರವಿ ಬಂಧಿತ ಪತ್ರಕರ್ತ. ಈತ ಸದ್ದಿಲ್ಲದೆ ಹಾಯ್ ಕರಾವಳಿ ಪತ್ರಿಕೆಯಲ್ಲಿ ಮಾನಹಾನಿ ಸುದ್ದಿಗಳನ್ನ ಪ್ರಕಟಿಸುತ್ತಿದ್ದ ಎನ್ನಲಾಗಿದೆ. ಈತ ಇತ್ತೀಚೆಗೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಬಂದು, ಹೆಬ್ರಿಯ ಹಳೆ ಚಾಮ್ಸ್ ಫ್ಯಾಕ್ಟರಿ ಬಳಿ ನಡೆದುಕೊಂಡು ಹೋಗ್ತಾಯಿದ್ದ ಪುಷ್ಪರಾಜ್ ಎಂಬವರನ್ನ ಅಡ್ಡಗಟ್ಟಿ ಸುಳ್ಳು ಸುದ್ದಿ ಪ್ರಕಟಿಸಬಾರದೆಂದಾದ್ರೆ ಒಂದು ಲಕ್ಷ ನೀಡಬೇಕು ಎಂಬ ಹಣದ ಬೇಡಿಕೆ ಇಟ್ಟಿದ್ದ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಅಲ್ಲದೆ ನೀನು ನಿನ್ನ ಕುಟುಂಬದವರು ನೀಚ ಜಾತಿಗೆ ಸೇರಿದವರು ಎಂದು ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ನನ್ನ ಪ್ರಭಾವದಿಂದ ನಿನ್ನ ಮೇಲೆ ಒಂದು ಹುಡುಗಿಯ ಕೇಸ್ ಮಾಡಿ ಈ ಹಿಂದೆ ನನ್ನ ಹಾಯ್ ಕರಾವಳಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಿದ್ದೇನೆ. ನನಗೆ ಹಣ ನೀಡದಿದ್ದಲ್ಲಿ ಮತ್ತೆ ಸುದ್ದಿ ಹಾಕುತ್ತೇನೆ ಎಂದು ಬೆದರಿಕೆ ಕೂಡ ಹಾಕಿದ್ದಾನೆ ಎಂದು ದೂರಿನಲ್ಲಿ ಪುಷ್ಪರಾಜ್​ ಆರೋಪಿಸಿದ್ದಾರೆ.

ಈ ರೀತಿ ಬೆದರಿಕೆ ಹಾಕಿದ್ದ ಈತ ಹೆಬ್ರಿಯ ಸರ್ಕಲ್ ನಲ್ಲಿ ಪತ್ರಿಕೆ ಹಂಚುತ್ತಿದ್ದ ವೇಳೆ ಪುಷ್ಪರಾಜನಿಗೂ ಸಹ ಒತ್ತಾಯದಿಂದ ಪತ್ರಿಕೆ ನೀಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ, ಮಾನಹಾನಿ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.

ABOUT THE AUTHOR

...view details