ಉಡುಪಿ: ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟಗೊಂಡ ಬಳಿಕ ದೆಹಲಿಯಲ್ಲಿ ಮಹತ್ವದ ಸಭೆ ನಡೆಯಿತು. ಕರ್ನಾಟಕದ ಮೂವರು ಸ್ವಾಮೀಜಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದು ಎಲ್ಲರೂ ಕೂಡಾ ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ್ದಾರೆ.
ದೆಹಲಿ ಸಭೆಯಲ್ಲಿ ಹಿಂದೂ,ಮುಸ್ಲಿಂ ಸಂತರಿಂದ ಅಯೋಧ್ಯೆ ತೀರ್ಪಿಗೆ ಸ್ವಾಗತ: ಪೇಜಾವರ ಶ್ರೀ - ದೆಹಲಿಯಲ್ಲಿ ಅಯೋಧ್ಯೆ ತೀರ್ಪಿನ ಬಗ್ಗೆ ಮಹತ್ವದ ಸಭೆ
ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟಗೊಂಡ ಬಳಿಕ ದೆಹಲಿಯಲ್ಲಿ ಹಿಂದೂ ಹಾಗೂ ಮುಸ್ಲಿಂ ಸಂತರ ಸಭೆ ನಡೆದಿದೆ. ಸಭೆಯಲ್ಲಿ 40ರಿಂದ 50 ಹಿಂದೂ ಹಾಗೂ ಮುಸ್ಲಿಂ ಸಂತರು ಭಾಗವಹಿಸಿದ್ದು, ಎಲ್ಲರೂ ಒಂದಾಗಿ ಸೌಹಾರ್ದದಿಂದ ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ್ದಾರೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಸಭೆಯಲ್ಲಿ ಮುಸ್ಲಿಂ ಸಂತರಲ್ಲದೆ, ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀ, ಸುತ್ತೂರು ಶ್ರೀ ಹಾಗೂ ಆದಿಚುಂಚನಗಿರಿ ಶ್ರೀ ಭಾಗಿಯಾಗಿದ್ದರು. ಸಭೆಯ ಬಗ್ಗೆ ಮಾತನಾಡಿರುವ ಪೇಜಾವರ ಶ್ರೀಗಳು, ಸಭೆಯಲ್ಲಿ 40ರಿಂದ 50 ಹಿಂದೂ ಹಾಗೂ ಮುಸ್ಲಿಂ ಸಂತರು ಭಾಗವಹಿಸಿದ್ದು, ಎಲ್ಲರೂ ಒಂದಾಗಿ ಸೌಹಾರ್ದದಿಂದ ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದ ಏಕತೆ, ಪ್ರಗತಿಗೆ ಸೌಹಾರ್ದದಿಂದ ಕಾರ್ಯ ಮಾಡಲು ತೀರ್ಮಾನ ಕೈಗೊಳ್ಳಲಾಗಿದ್ದು, ತಾತ್ವಿಕ ಭಿನ್ನತೆ ಇದ್ದರೂ ಎಲ್ಲರೂ ತೀರ್ಪನ್ನು ಏಕಕಂಠದಿಂದ ಒಪ್ಪಿದ್ದಾರೆ. ದೇಶದ ಎಲ್ಲಾ ಭಾಗಗಳಿಂದ ಸಂತರು, ಮೌಲ್ವಿಗಳು ಬಂದಿದ್ದರು. ಸೌಹಾರ್ದ ವಾತಾವರಣದಲ್ಲಿ ಚರ್ಚೆ ನಡೆಯಿತು. ಯಾರಿಗೂ ತೀರ್ಪಿನ ಬಗ್ಗೆ ಅಸಮಾಧಾನ ಇರಲಿಲ್ಲ. ದೇಶದ ಧಾರ್ಮಿಕ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಘಟ್ಟ. ಯಾವುದೇ ಅಸಮಾಧಾನ, ಘರ್ಷಣೆ ವಿರೋಧ ಇಲ್ಲದೆ ಸೌಹಾರ್ದದಿಂದ ಒಟ್ಟಾಗಿ ಕೆಲಸ ಮಾಡುವ ತೀರ್ಮಾನ ಮಾಡಲಾಗಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಇದೊಂದು ಉತ್ತಮ ಬೆಳವಣಿಗೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.