ಉಡುಪಿ:ಆಟೋ ಚಾಲಕರೊಬ್ಬರು ಮನೆಯ ಮಾಡಿನ ಜಂತಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ 76 ಬಡಗುಬೆಟ್ಟುವಿನ ಬೈಲೂರಿನಲ್ಲಿ ನಡೆದಿದೆ.
ಉಡುಪಿ: ಆಟೋ ಚಾಲಕ ಆತ್ಮಹತ್ಯೆಗೆ ಶರಣು - ಉಡುಪಿಯಲ್ಲಿ ಆಟೋ ಚಾಲಕ ಆತ್ಮಹತ್ಯೆ
ಲಾಕ್‌ಡೌನ್ ವೇಳೆ ದುಡಿಮೆಯಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಕಾರಣ ಮನನೊಂದು ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ದೊರೆತಿದೆ.
ಆಟೋ ಚಾಲಕ ಆತ್ಮಹತ್ಯೆ
ಮೃತ ವ್ಯಕ್ತಿ ಯತಿರಾಜ್ (40). ಲಾಕ್‌ಡೌನ್ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ದುಡಿಮೆ ಇಲ್ಲದೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ: ತಿರುಪತಿಯಲ್ಲಿ ಆಕ್ಸಿಜನ್ ಕೊರತೆ: 11 ಕೋವಿಡ್ ಸೋಂಕಿತರು ಸಾವು!