ಕರ್ನಾಟಕ

karnataka

ETV Bharat / state

ಉಡುಪಿ ಕೃಷ್ಣ ಮಠದಲ್ಲಿ ಸರಳವಾಗಿ ಅರ್ಘ್ಯ ಪ್ರದಾನ... ಇಂದು ಶ್ರೀಕೃಷ್ಣ ಲೀಲೋತ್ಸವ - ಶ್ರೀಕೃಷ್ಣ ಲೀಲೋತ್ಸವ

ನಿನ್ನೆ ರಾತ್ರಿ 12:16 ಸರಿಯಾಗಿ ಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ ನಡೆಯಿತು. ಇಂದು ಶ್ರೀಕೃಷ್ಣ ಲೀಲೋತ್ಸವ ಜರುಗಲಿದೆ.

Ashtami celebration in Udupi
ಉಡುಪಿ ಕೃಷ್ಣ ಮಠದಲ್ಲಿ ಸರಳವಾಗಿ ಅರ್ಘ್ಯ ಪ್ರದಾನ...ಇಂದು ಶ್ರೀಕೃಷ್ಣ ಲೀಲೋತ್ಸವ

By

Published : Sep 11, 2020, 6:50 AM IST

ಉಡುಪಿ:ಪ್ರಸಿದ್ಧ ವೈಷ್ಣವ ಕ್ಷೇತ್ರವಾಗಿರುವ ಕೃಷ್ಣ ಮಠದಲ್ಲಿ ಸಂಪ್ರದಾಯಾನುಸಾರವಾಗಿ, ಕೋವಿಡ್​ ಮುಂಜಾಗ್ರತಾ ಕ್ರಮಗಳೊಂದಿಗೆ ಅಷ್ಟಮಿ ಆಚರಣೆ ನಡೆಸಲಾಗುತ್ತಿದೆ.

ನಿನ್ನೆ ಹಗಲು ಉಪವಾಸವಿದ್ದ ಕೃಷ್ಣ ಭಕ್ತರು ತಮ್ಮ-ತಮ್ಮ ಮನೆಗಳಲ್ಲಿ ಅರ್ಘ್ಯ ಪ್ರದಾನ ನೆರವೇರಿಸಿದರು. ರಾತ್ರಿ 12:16 ಸರಿಯಾಗಿ ಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ ನಡೆಯಿತು. ಕೃಷ್ಣ ದೇವರು ಭೂಮಿಗೆ ಅವತರಿಸುವ ಕಾಲದಲ್ಲಿ ಅರ್ಘ್ಯ ಪ್ರದಾನ ನಡೆಸುವ ಪದ್ಧತಿ ಇದೆ. ಅದರಂತೆ ಪರ್ಯಾಯ ಅದಮಾರು ಮಠಾಧೀಶರ ನೇತೃತ್ವದಲ್ಲಿ ಅಷ್ಟಮಠಾಧೀಶರು ಉಪಸ್ಥಿತರಿದ್ದು ಅರ್ಘ್ಯ ಪ್ರದಾನ ನೆರವೇರಿಸಿದರು.

ಅರ್ಘ್ಯ ಪ್ರದಾನ

ಕೃಷ್ಣ ದೇವರಿಗೆ ಹಾಲು ಮತ್ತು ನೀರಿನ ಅಭಿಷೇಕ ಮಾಡಿ ಅರ್ಘ್ಯ ಬಿಡಲಾಯಿತು. ಇಷ್ಟು ವರ್ಷಗಳ ಕಾಲ ಸಾರ್ವಜನಿಕರಿಗೂ ಅರ್ಘ್ಯ ಪ್ರದಾನ ಮಾಡಲು ಮಠದಲ್ಲಿ ಅವಕಾಶವಿತ್ತು. ಆದರೆ ಈ ಬಾರಿ ಕೋವಿಡ್​​ ಹಿನ್ನೆಲೆ ಮಠದೊಳಗೆ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಯಾವುದೇ ಆಡಂಬರವಿಲ್ಲದೆ ಮೂಲ ಸಂಪ್ರದಾಯದಂತೆ ಕೃಷ್ಣ ಮಠದಲ್ಲಿ ಈ ಬಾರಿ ಹಬ್ಬ ಆಚರಿಸಲಾಯಿತು. ಅಷ್ಟಮಿಯ ಮರುದಿನ ಅಂದರೆ ಇಂದು ಶ್ರೀಕೃಷ್ಣ ಲೀಲೋತ್ಸವ ಜರುಗಲಿದೆ. ರಥೋತ್ಸವದ ವೇಳೆ ಮಠದ ಸಿಬ್ಬಂದಿ ಮತ್ತು ಅಗತ್ಯವಾಗಿ ಇರಲೇಬೇಕಾದ ಬೆರಳೆಣಿಕೆಯ ವ್ಯಕ್ತಿಗಳಿಗಷ್ಟೇ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ABOUT THE AUTHOR

...view details