ಉಡುಪಿ:ಆಶಾ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಅವಮಾನವಾದರೆ ಸಹಿಸುವುದಿಲ್ಲ. ಇವರನ್ನು ಅವಮಾನಿಸುವವರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಜಿಲ್ಲಾಧಿಕಾರಿ ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆಶಾ, ಆರೋಗ್ಯ ಸಿಬ್ಬಂದಿಗೆ ಅವಮಾನಿಸಿದರೆ ಸಹಿಸುವುದಿಲ್ಲ; ಡಿಸಿ ಜಗದೀಶ್ - ಉಡುಪಿ ಜಿಲ್ಲಾಧಿಕಾರಿ ಜಗದೀಶ್
ಆಶಾ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಅವಮಾನವಾದರೆ ಸಹಿಸೋದಿಲ್ಲ. ನಿರ್ಲಕ್ಷಿಸಿದವರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಜಗದೀಶ್
ಹೆಬ್ರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಇಲಾಖೆಯ ಡಿಎಚ್ಓವರೆಗೆ
ಎಲ್ಲರೂ ಹಗಲು ರಾತ್ರಿ ಎನ್ನದೆ ಕೊರೊನಾ ಹೋರಾಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಅವಮಾನಿಸುವ ಕೆಲಸ ಕಂಡುಬಂದಲ್ಲಿ ಸುಮ್ಮನೆ ಕೂರುವುದಿಲ್ಲ. ಅಂತಹ ಕ್ರಿಮಿಗಳಿಗೆ ಪಾಠ ಕಲಿಸಲು ನಾವು ಸಿದ್ಧರಿದ್ದೇವೆ ಎಂದು ಡಿಸಿ ಜಗದೀಶ್ ಖಡಕ್ ಸಂದೇಶ ನೀಡಿದ್ದಾರೆ.