ಉಡುಪಿ:ಜಮ್ಮು-ಕಾಶ್ಮೀರದ ವಿಚಾರದಲ್ಲಿ ಗೃಹ ಸಚಿವ ಅಮಿತ್ ಶಾರವರು ತೆಗೆದುಕೊಂಡ ನಿರ್ಧಾರ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಬಾಯಿ ಪಾಟೇಲ್ರನ್ನು ನೆನಪಿಸುತ್ತಿದೆ. 370 ವಿಧಿಯನ್ನು ಅಮಿತ್ ಶಾ ರದ್ದು ಮಾಡುವ ಮೂಲಕ ಅವರು ಕೂಡ ಒಬ್ಬ ಉಕ್ಕಿನ ಮನುಷ್ಯರಾಗಿದ್ದಾರೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಮ್ಮು- ಕಾಶ್ಮೀರ ವಿಚಾರದಲ್ಲಿ ಕೇಂದ್ರದಿಂದ ಐತಿಹಾಸಿಕ ನಿರ್ಧಾರ.. ಕೋಟ ಶ್ರೀನಿವಾಸ ಪೂಜಾರಿ - ಜಮ್ಮು- ಕಾಶ್ಮೀರ ವಿಚಾರ
ಗೃಹ ಸಚಿವ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಬಾಯಿ ಪಾಟೇಲ್ರನ್ನು ನೆನಪಿಸುತ್ತಿದೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.
ಇಂದು ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು, ಐತಿಹಾಸಿಕವಾದ ನಿರ್ಧಾರವನ್ನು ಲೋಕಸಭೆಯಲ್ಲಿ ಅಮಿತ್ ಶಾರವರು ಮಂಡಿಸಿರುವ ರೀತಿ ಸರ್ದಾರ್ ವಲ್ಲಭ ಬಾಯಿ ನಂತರ ಒಬ್ಬ ಉಕ್ಕಿನ ಮನುಷ್ಯರಾಗಿ ಕಂಡು ಬಂದರು. ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರವನ್ನು ಎರಡು ರಾಷ್ಟ್ರ ಘಟಕವನ್ನಾಗಿ ಮತ್ತು ಒಂದು ಪ್ರದೇಶವನ್ನ ಕೇಂದ್ರಾಡಳಿತ ಪ್ರದೇಶವನ್ನಾಗಿ ಉಲ್ಲೇಖ ಮಾಡಿರುವಂತಹ ನಿಯಮಗಳು ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಶತ ಕೋಟಿ ಭಾರತೀಯರು ನರೇಂದ್ರ ಮೋದಿಯನ್ನ ಪ್ರಧಾನಮಂತ್ರಿಯನ್ನಾಗಿ ಮಾಡಿದ್ದು ಸಾರ್ಥಕವಾಯಿತು ಎಂಬ ಭಾವನೆ ರಾಜ್ಯಾದ್ಯಂತ ವ್ಯಕ್ತವಾಗುತ್ತಿದೆ ಎಂದರು.
370 ವಿಧಿ ರದ್ದತಿ:
ಈ ವಿಧಿಯ ಮೂಲಕ ಕಾಶ್ಮೀರ ನೆಲವನ್ನು ಬೇರಾರಿಗೂ ಕೂಡ ಖರೀದಿ ಮಾಡಲಾಗದು. ಭಾರತ ಸಂವಿಧಾನದ ಅನೇಕ ವಿಚಾರಗಳು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ ಎನ್ನುವ ರೀತಿ ನೀತಿಗಳು, ಕಾಶ್ಮೀರ ಬೇರ್ಪಟ್ಟು ಹೋಗುತ್ತದೆ ಎನ್ನುವ ಭೀತಿ ಇತ್ತು. ಆದರೆ, ಇವತ್ತು ವ್ಯವಸ್ಥಿತವಾಗಿ ಹತ್ತಿಕ್ಕಿ ಇಡೀ ರಾಷ್ಟ್ರವನ್ನು ಒಂದಾಗಿ ಕೊಂಡೊಯ್ಯುವಲ್ಲಿ ಭಾರತ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಶಾ ಅವರು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಪ್ರತಿಯೊಬ್ಬರು ಬೇಧವನ್ನು ಮರೆತು ಈ ಯೋಜನೆಯನ್ನು ಸ್ವಾಗತಿಸಬೇಕು ಎಂದರು.