ಕರ್ನಾಟಕ

karnataka

ETV Bharat / state

ಒಂದೇ ದಿನದಲ್ಲಿ ಯೋಗೇಶ್ ಕೊಲೆ ಪ್ರಕರಣ ಭೇದಿಸಿದ ಮಲ್ಪೆ ಪೊಲೀಸರು! - ಉಡುಪಿ ಕೊಲೆ ಪ್ರಕರಣ ಭೇಧಿಸಿದ ಮಲ್ಪೆ ಪೊಲೀಸರು ಸುದ್ದಿ

ಕ್ಷುಲ್ಲಕ ಕಾರಣಕ್ಕೆ ಈ ತಂಡ ಯೋಗೀಶ್ ಅವರನ್ನು ಕೊಲೆಗೈದಿತ್ತು. ಮಾರಕಾಸ್ತ್ರಗಳಿಂದ ತಿವಿದು ಯೋಗೀಶ ಅವರನ್ನು ಹತ್ಯೆ ಮಾಡಲಾಗಿತ್ತು.

ಮೂವರ ಆರೋಪಿಗಳ ಬಂಧನ
ಮೂವರ ಆರೋಪಿಗಳ ಬಂಧನ

By

Published : Jul 8, 2020, 2:31 PM IST

ಉಡುಪಿ: ಲಕ್ಷ್ಮೀ ನಗರ ಬೆಳ್ಕಳೆ ಯೋಗೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದ ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ ಪೊಲೀಸರು ಕುಖ್ಯಾತ ರೌಡಿ ಶೀಟರ್ ಸುಜಿತ್ ಪಿಂಟೋ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಜಿತ್ ಸಹೋದರ ರೋಹಿತ್ ಪಿಂಟೋ ಅಣ್ಣು ಯಾನೆ ಪ್ರದೀಪ್, ವಿನಯ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಮಲ್ಪೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನ

ಕ್ಷುಲ್ಲಕ ಕಾರಣಕ್ಕೆ ಈ ತಂಡ ಯೋಗೀಶ್ ಅವರನ್ನು ಕೊಲೆಗೈದಿತ್ತು. ಮಾರಕಾಸ್ತ್ರಗಳಿಂದ ತಿವಿದು ಯೋಗೀಶ್ ಅವರನ್ನು ಹತ್ಯೆ ಮಾಡಲಾಗಿತ್ತು. ಕೊಲೆ ನಡೆದ ಸ್ಥಳಕ್ಕೆ ಆರೋಪಿಗಳನ್ನು ಮಹಜರಿಗೆ ಕರೆತಂದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details