ಉಡುಪಿ:ಕೋಟೇಶ್ವರದ ಜೂನಿಯರ್ ಕಾಲೇಜ್ ಬಳಿ ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ 7 ಜನರ ಬಂಧನ: 29 ಸಾವಿರ ರೂ. ನಗದು ವಶ - ಐಪಿಎಲ್ ಬೆಟ್ಟಿಂಗ್ ದಂಧೆ
ಉಡುಪಿಯ ಕೋಟೇಶ್ವರದ ಜೂನಿಯರ್ ಕಾಲೇಜ್ ಬಳಿ ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಐಪಿಎಲ್ ಬೆಟ್ಟಿಂಗ್
ರಾಘವೇಂದ್ರ, ಶೃತಿ ರಾಜ್, ಸುಭಾಷ್, ಸರ್ಫರಾಜ್, ಮುರುಳಿ ರತೇಶ್ , ರಾಘವೇಂದ್ರ ಬಂಧಿತ ಆರೋಪಿಗಳು. ಬೆಟ್ಟಿಂಗ್ ಧರವನ್ನು ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಕೂಗುತ್ತಿದ್ದ ವೇಳೆ ಇದು ಪೊಲೀಸರ ಗಮನಕ್ಕೆ ಬಂದು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ 29 ಸಾವಿರ ರೂ. ನಗದು, ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.